ಕಾಂಗ್ರೆಸ್ ಗೆ ಪಾಕಿಸ್ತಾನ ಮ್ಯಾಚ್ ನೆನಪಿಸಿ ಟಾಂಗ್ ಕೊಟ್ಟ ಸಿಟಿ ರವಿ
ಮೊನ್ನೆಯಷ್ಟೇ ರಮ್ಯಾ ಕೇದಾರ್ ಜಾದವ್ ಬೌಲಿಂಗ್ ನ್ನು ಕುಸಿಯುತ್ತಿರುವ ಭಾರತೀಯ ರೂಪಾಯಿಗೆ ಹೋಲಿಸಿ ಕೇಂದ್ರಕ್ಕೆ ಟಾಂಗ್ ಕೊಟ್ಟಿದ್ದರು. ಇದೀಗ ಸಿಟಿ ರವಿ ಸರದಿ.
‘ಏಷ್ಯಾ ಕಪ್ ನಲ್ಲಿ ನಮ್ಮ ಓಪನರ್ ಗಳು ರಾಹುಲ್ ಗಾಂಧಿಯ ಪಾಕಿಸ್ತಾನವನ್ನು ಸೋಲಿಸಿಬಿಟ್ಟರು. ಅದೇ ರೀತಿ 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಅಮಿತ್ ಶಾ ಸೇರಿಕೊಂಡು ಭಾರತದಲ್ಲಿರುವ ಪಾಕಿಸ್ತಾನಿ ಕಾಂಗ್ರೆಸ್ ನ್ನು ಸೋಲಿಸಲಿದ್ದಾರೆ’ ಎಂದು ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.