ರಾಜ್ಯದ ಜನತೆಗೆ ಕರೆಂಟ್​​ ಶಾಕ್​!

ಶುಕ್ರವಾರ, 1 ಜುಲೈ 2022 (20:28 IST)
ರಾಜ್ಯದಲ್ಲಿ ಇಂದಿನಿಂದ ಮತ್ತೆ ವಿದ್ಯುತ್ ದರ ಏರಿಕೆಯಾಗಲಿದ್ದು, ಪ್ರತಿ ಯೂನಿಟ್​​​​ಗೆ ಐದು ಪೈಸೆಯಷ್ಟು ವಿದ್ಯುತ್ ದರವನ್ನು ಹೆಚ್ಚಿಸುವುದರ ಮೂಲಕ ರಾಜ್ಯ ಸರ್ಕಾರ ಜನರಿಗೆ ವಿದ್ಯುತ್ ದರ ಏರಿಕೆಯ ಶಾಕ್ ನೀಡಿದೆ. ಈ ಕುರಿತಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ  ಅನುಮೋದನೆ ನೀಡಿದೆ. ವಿದ್ಯುತ್ ದರವನ್ನು ಪರಿಷ್ಕರಿಸಲು ಮತ್ತು ಇಂಧನ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ವಿದ್ಯುತ್ ಸರಬರಾಜು ಕಂಪನಿಗಳು ಪ್ರಸ್ತಾವನೆ ಸಲ್ಲಿಸಿದ್ದವು. ಜುಲೈ 1ರಿಂದ ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ 19-31 ಪೈಸೆ ಹೆಚ್ಚಳವಾಗಲಿದೆ. ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು ಇನ್ಮುಂದೆ 19 ರಿಂದ 31 ಪೈಸೆ ಪಾವತಿಸಬೇಕು. ಕಳೆದ ಎರಡು ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳ ಹಿನ್ನೆಲೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದ್ದು ಎಸ್ಕಾಂಗಳ ಮನವಿ ಮೇರೆಗೆ KERC ದರ ಏರಿಕೆ ಮಾಡಲಿದೆ. 200 ಯೂನಿಟ್ಗಳನ್ನು ಬಳಸುವ ಸರಾಸರಿ ಗ್ರಾಹಕರು ಮಾಸಿಕ ಬಿಲ್​​​ನಲ್ಲಿ ರೂ 40 ಹೆಚ್ಚು ಪಾವತಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ