ಝೋಮ್ಯಾಟೋ ಡೆಲಿವರಿ ಲೇಟ್ , ಆರತಿ ಮಾಡಿದ ಗ್ರಹಕರು

ಭಾನುವಾರ, 9 ಅಕ್ಟೋಬರ್ 2022 (16:24 IST)
ಹಬ್ಬದ ಸೀಸನ್, ಸತತ ಮಳೆ, ಭಾರಿ ಟ್ರಾಫಿಕ್.. ಇದರ ನಡುವೆ ಆರ್ಡರ್ ಮಾಡಿದವರಿಗೆ ಫುಡ್ ಡೆಲಿವರಿ ಅತೀ ದೊಡ್ಡ ಸವಾಲು. ಅದರೂ ಫುಡ್ ಡೆಲಿವರ್ ಬಾಯ್ಸ್ ತಕ್ಕ ಸಮಯಕ್ಕೆ ಫುಡ್ ಡೆಲವರಿ ಮಾಡುತ್ತಾರೆ. ದೆಹಲಿಯಲ್ಲಿ ಇದೇ ಹಬ್ಬದ ಸೀಸನ್‌ನಲ್ಲಿ ಜೋಮ್ಯಾಟೋ ಬಾಯ್ ಫುಡ್ ಡೆಲಿವರಿ ಮಾಡಲು ತಡವಾಗಿದೆ.
ಸುಮಾರು ಒಂದು ಗಂಟೆ ತಡವಾಗಿದೆ. ಆಹಾರ ಪ್ಯಾಕೆಟ್ ಎತ್ತಿ ಓಡೋಡಿ ಬಂದ ಜೋಮ್ಯಾಟೋ ಡೆಲಿವರಿ ಬಾಯ್‌ಗೆ ಅಚ್ಚರಿ ಕಾದಿತ್ತು. ದೆಹಲಿ ವ್ಯಕ್ತಿ ಆರತಿ ಹಿಡಿದು ಜೋಮ್ಯಾಟೋ ಬಾಯ್ ಸ್ವಾಗತಿಸಿದ್ದಾರೆ. ಹಣೆಗೆ ತಿಲಕವಿಟ್ಟು ನಿಮಗಾಗಿ ಕಾಯುತ್ತಿದ್ದೇವೆ ಎಂಬ ಹಾಡನ್ನು ಹಾಡಿದ್ದಾರೆ. ಈ ಎಲ್ಲಾ ಘಟನೆಯನ್ನು ಕುಟುಂಬ ಸದಸ್ಯರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ದಿಲ್ಲಿಯ ಟ್ರಾಫಿಕ್ ನಡುವೆ, ಥ್ಯಾಂಕ್ಯೂ ಜೋಮ್ಯಾಟೋ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
 
ಸಂಜೀವ್ ಕುಮಾರ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹಬ್ಬದ ಆವೃತ್ತಿ, ದೆಹಲಿಯಲ್ಲಿ ಸತತ ಮಳೆ, ಜೊತೆಗೆ ಭಾರಿ ಟ್ರಾಫಿಕ್‌ನಿಂದ ತಕ್ಕ ಸಮಯಕ್ಕೆ ಯಾರೂ ತಲುಪಿಲ್ಲ. ಈ ಕಾರಣಗಳಿಂದ ಜೋಮ್ಯಾಟೋ ಬಾಯ್ ಫುಡ್ ಡೆಲವರಿ 1 ಗಂಟೆ ತಡವಾಗಿದೆ. ಹಬ್ಬದ ಊಟ ಸವಿಯಲು ದೆಹಲಿಯ ಕುಟುಂಬ ಆರ್ಡರ್ ಮಾಡಿದ ಫುಡ್ ಬರುವಿಕೆಗೆ ಕಾದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ