ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ

ಮಂಗಳವಾರ, 11 ಅಕ್ಟೋಬರ್ 2022 (20:02 IST)
ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗೂ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ಸರಕಾರ ಹಲವಾರು ಬಾರಿ ಹೇಳುತ್ತದೆ. ಆದರೆ ಇಲ್ಲೊಂದು ತಂಡವೊಂದು ನಮ್ಮ ಪರಿಸರವನ್ನು ಸುಂದರವಾಗಿಟ್ಟುಕೊಳ್ಳಬೇಕು ಎಂಬ ಪರಿಕಲ್ಪನೆಯಡಿ ಶಿವಮೊಗ್ಗದಿಂದ ಮಂತ್ರಾಲಯದವರೆಗೂ ಸೈಕಲ್ ಜಾಥಾ ಹಮ್ಮಿಕೊಂಡಿದೆ.
 
ಶಿವಮೊಗ್ಗ ಮತ್ತು ಕೊಪ್ಪ ಭಾಗದ ೧೦ ಜನರ ತಂಡವೊಂದು ಮಾನ್ವಿಗೆ ಆಗಮಿಸಿ ಮಂತ್ರಾಲಯಕ್ಕೆ ಸೈಕಲ್ ಜಾಥಾ ಹಮ್ಮಿಕೊಂಡು ಮಾರ್ಗ ಮಧ್ಯೆ ಬರುವ ಊರುಗಳಲ್ಲಿ ನಿಂತು ರಕ್ತದಾನ ಹಾಗೂ ನೇತ್ರದಾನ ಮಾಡುವುದರ ಜೊತೆಗೆ ಪರಿಸರವನ್ನು ಕಾಪಾಡಿಕೊಳ್ಳಿ ಎಂದು ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
 
ಈ ತಂಡವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ನಿಮ್ಮ ಮನೆಯ ಮುಂದೆ ಇರುವ ಕಸವನ್ನು ನೀವೆ ಸ್ವಚ್ಛಮಾಡಿದಾಗ ನಮ್ಮ ಊರೆ ಸ್ವಚ್ಛವಾಗುತ್ತದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಇವರ ಆಗಮನವನ್ನು ಕಂಡು ಮಾನ್ವಿ ಪಟ್ಟಣದ ಸಾಮಾಜಿಕ ಕಾರ್ಯಕರ್ತರು ಸ್ವಾಗತಿಸಿ ಅವರ ಜೊತೆ ಕುಷಲೋಪರಿ ವಿಚಾರಿಸಿ ಅಭಿನಂದಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ