ಡಿ. 29ರಂದು ಆಟೋ ಚಾಲಕರಿಂದ ಬೃಹತ್ ಪ್ರತಿಭಟನೆ

ಗುರುವಾರ, 22 ಡಿಸೆಂಬರ್ 2022 (18:36 IST)
ಹೊಸ ವರ್ಷಕ್ಕೆ ಇನ್ನೀನು ಕೆಲವೇ ದಿನಗಳು ಬಾಕಿ ಇದೆ. ನ್ಯೂ ಇಯರ್ ಗೆ ಆಟೋನಲ್ಲಿ ಎಲ್ಲಾದರೂ ಹೋಗೊ ಪ್ಲ್ಯಾನ್ ಇದ್ರೆ ಅದನ್ನು ಇವಾಗಲೀ ಬದಲಾಯಿಸಿಕೊಳ್ಳೋದು ಒಳ್ಳೇದು. ಯಾಕಂದ್ರೆ ಅವತ್ತು ನಿಮಗೆ ಆಟೋ ಸಿಗೋದು ಬಹುತೇಕ ಡೌಟ್.ಇನ್ನೇನು ತಿಂಗಳ ಕೊನೇ . ನ್ಯೂ ಇಯರ್ ಗೆ  ಆಟೋನಲ್ಲಿ ಅಲ್ಲಿ ಹೋಗೋಣ, ಇಲ್ಲಿ  ಹೋಗೋಣ ಅಂತ ಪ್ಲ್ಯಾನ್ ಮಾಡಿದ್ರೆ ಅದನ್ನು ಮೊದಲು ಚೇಂಜ್ ಮಾಡಿ.. ಯಾಕಂದ್ರೆ ಕೊನೆ ವಾರ ಅಂದರೆ ಡಿ. 29ರಂದು ಬೆಂಗಳೂರಿನಾದ್ಯಂತ ಆಟೋ ಸಂಚಾರವನ್ನು ಸ್ಥಗಿತಗೊಳಿಸಲು ಆಟೋ ಚಾಲಕರು ಮುಂದಾಗಿದ್ದಾರೆ. ರ್ಯಾಪಿಡೋ ಬೈಕ್ ಟ್ಯಾಕ್ಸಿ ಆಯಪ್ ಬ್ಯಾನ್, ಬೌನ್ಸ್ ಎಲೆಕ್ಟ್ರಿಕ್ ಬೈಕ್ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರು ರಾಜ್ಯ ಸಾರಿಗೆ ಇಲಾಖೆಯ ವಿರುದ್ಧ ಸಿಡಿದೆದ್ದಿದ್ದಾರೆ. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ನಿಂದ ಬೃಹತ್ ಆಟೋ ರ್ಯಾ ಲಿ ಮೂಲಕ ವಿಧಾನಸೌಧಕ್ಕೆ ತೆರಳಿ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ಈ ಆಟೋ ಮುಷ್ಕರಕ್ಕೆ ಈಗಾಗಲೇ 21 ಆಟೋ ಸಂಘಟನೆಗಳು ಸಾಥ್ ನೀಡಿವೆ. ರಾಜಧಾನಿಯ ಎರಡು ಲಕ್ಷದ ಹತ್ತು ಸಾವಿರ ಆಟೋ ಚಾಲಕರು ಈಗಾಗಲೇ ಈ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಹೀಗಾಗಿ ಡಿ 21ರ ಗುರುವಾರದಂದು ರಾಜಧಾನಿಯಲ್ಲಿ ಸಂಪೂರ್ಣ ಆಟೋ ಸಂಚಾರ ಸ್ತಬ್ಧವಾಗಲಿದೆ.ದಿನೇ ದಿನೇ ರ್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಇದರಿಂದಾಗಿ ಆಟೋ ಚಾಲಕರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಯಾವುದೇ ಅನುಮತಿ ಇಲ್ಲದೇ ಇದ್ದರೂ ಕೂಡ ರ್ಯಾಪಿಡೋ ವಾಹನಗಳು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ.

ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ ಎಲೆಕ್ಟ್ರಿಕ್ ಬೈಕ್ಗಳಿಗೆ ಅನುಮತಿ ನೀಡಿದೆ. ಮೊದಲ ಹಂತದಲ್ಲಿ 100 ಇ- ಬೈಕ್ಗಳನ್ನ ರಸ್ತೆಗಿಳಿಸಲು ನಿರ್ಧರಿಸಿದ್ದ ಬೌನ್ಸ್ ಕಂಪನಿ, ಈಗ ಹಂತ ಹಂತವಾಗಿ 1000 ಇ- ಬೈಕ್ಗಳನ್ನ ರಸ್ತೆಗಿಳಿಸಲು ನಿರ್ಧಾರ ತೆಗೆದುಕೊಂಡಿದೆ. ಕೊರೋನಾ ಸಮಯದಲ್ಲಿ ಸ್ಥಗಿತಗೊಂಡಿದ್ದ ಸೇವೆಯನ್ನು ಪುನಃ ಪ್ರಾರಂಭಿಸಲು ಬೌನ್ಸ್ ಕಂಪನಿ ಅನುಮತಿ ಕೇಳಿ ಅರ್ಜಿ ಸಲ್ಲಿಸಿದೆ. ಇದರಿಂದಾಗಿ ಆಟೋ ಚಾಲಕರ ದುಡಿಮೆಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ