ಭಾರತ-ಬಾಂಗ್ಲಾ ಟೆಸ್ಟ್: ಟೀಂ ಇಂಡಿಯಾ ಹಿಡಿತದಲ್ಲಿ ಬಾಂಗ್ಲಾ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ ಮೊದಲ ಇನಿಂಗ್ಸ್ ನಲ್ಲಿ 227 ಕ್ಕೆ ಆಲೌಟ್ ಆಯಿತು. ಮೊಮಿನುಲ್ 84 ರನ್ ಗಳಿಸಿ ಮಿಂಚಿದರು. ಭಾರತದ ಪರ ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್ ತಲಾ 4 ವಿಕೆಟ್ ಮತ್ತು ಜಯದೇವ್ ಉನಾದ್ಕಟ್ 2 ವಿಕೆಟ್ ಕಬಳಿಸಿದರು.
ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ ಇದೀಗ 8 ಓವರ್ ಗಳ ಆಟ ಆಡಿದ್ದು 19 ರನ್ ಗಳಿಸಿದೆ. ಆರಂಭಿಕರಾದ ಕೆಎಲ್ ರಾಹುಲ್ 3 ಮತ್ತು ಶುಬ್ನಂ ಗಿಲ್ 14 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರತ ಇನ್ನೂ 208 ರನ್ ಗಳ ಹಿನ್ನಡೆಯಲ್ಲಿದೆ.