ಸ್ಪೂನ್ನಿಂದ ಮಗನ ಕೂದಲು ಕತ್ತರಿಸಿದ ಅಪ್ಪ
ಚಾಕು, ಕತ್ತರಿ, ಟ್ರಿಮ್ಮರ್ ಇದೆಲ್ಲ ಬೇಡವಂತೆ. ಒಂದು ಚಮಚ ಸಾಕು ನನ್ನ ಮಗನ ಕೂದಲು ಕತ್ತರಿಸಲು, ನೋಡಿ ಹೇಗೆ ಮ್ಯಾಜಿಕ್ ಮಾಡುತ್ತೇನೆ ಎನ್ನುತ್ತಿದ್ದಾನೆ ಈ ಅಪ್ಪ. ಈ ಅಪ್ಪ ಮಗ ಅಮೆರಿಕದಲ್ಲಿ ವಾಸಿಸುತ್ತಿದ್ದು, ಮನೆಯಲ್ಲಿ ಕುಳಿತುಕೊಂಡೇ ಜಗತ್ತಿನ ಮಂದಿ ತಮ್ಮತ್ತ ಹೊರಳಿ ನೋಡುವ ಹಾಗೆ ಮ್ಯಾಜಿಕ್ ಮಾಡಿದ್ದಾರೆ. ಚಮಚದ ಏಣಿನಿಂದ ಈತ ಸರಾಗವಾಗಿ ಮಗನ ಕೂದಲನ್ನು ಕತ್ತರಿಸುವುದನ್ನು ನೋಡುತ್ತಿದ್ದರೆ ಅದು ಚಮಚ ಎಂದು ನಂಬಲು ಆಗುವುದೇ ಇಲ್ಲ. ತಂದೆಯ ಈ ಅದ್ಭುತ ಕೌಶಲ್ಯವನ್ನು ಪ್ರೇಕ್ಷಕರು ಶ್ಲಾಘಿಸಿದ್ದಾರೆ. ಸದ್ಯ ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.