ಮೈತ್ರಿ ಸರಕಾರಕ್ಕೆ ಚುಚ್ಚುತ್ತಿದೆ ಡೈರಿ ಪಾಲಿಟಿಕ್ಸ್ ಮುಳ್ಳು; ರೇವಣ್ಣ ಡಬಲ್ ಗೇಮ್?

ಬುಧವಾರ, 22 ಮೇ 2019 (15:06 IST)
ಮತ್ತಷ್ಟು ವಿಕೋಪಕ್ಕೆ ತೆರಳಿದ ಡೈರಿ ಪಾಲಿಟಿಕ್ಸ್ ರಾಜ್ಯದ ಮೈತ್ರಿ ಸರಕಾರದ ಮೇಲೆ ಪ್ರಭಾವ ಬೀರಲಾರಂಭಿಸಿದೆ.
ಸಚಿವ ಎಚ್. ಡಿ. ರೇವಣ್ಣ ವಿರುದ್ಧ ಕಾಂಗ್ರೆಸ್ ಶಾಸಕರು ಕೆಂಡಾಮಂಡಲರಾಗಿದ್ದರೆ.

ಬೆಂಗಳೂರು ಡೈರಿ ಅಧ್ಯಕ್ಷ ಚುನಾವಣೆ ವಿಚಾರದಲ್ಲಿ ಎಚ್. ಡಿ. ರೇವಣ್ಣ ಡಬಲ್ ಗೇಮ್ ಆಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಏಳು ನಿರ್ದೇಶಕರನ್ನು ಕಾಂಗ್ರೆಸ್ ಹೊಂದಿದೆ. ಮೂವರು ನಿರ್ದೇಶಕರನ್ನು ಮಾತ್ರ ಹೊಂದಿದೆ ಜೆಡಿಎಸ್.
ಸ್ವತಂತ್ರವಾಗಿ ಚುನಾವಣೆ ಎದುರಿಸೋ ಬದಲು ಮೈತ್ರಿ ಧರ್ಮ ಪಾಲಿಸಲು ಮುಂದಾಗಿದೆ ಕಾಂಗ್ರೆಸ್. ಆದರೆ ರಾತ್ರೋ ರಾತ್ರಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಅನರ್ಹಗೊಳಿಸಿದ್ದಾರೆ ಜೆಡಿಎಸ್ ನಾಯಕರು. ಹೀಗಾಗಿ ಸಿಎಂ ಎಚ್ಡಿ ಕುಮಾರಸ್ವಾಮಿ ಮತ್ತು ಸಚಿವ ರೇವಣ್ಣ ವಿರುದ್ದ ಕಾಂಗ್ರೆಸ್ ನಾಯಕರು ಮೀಟಿಂಗ್ ನಡೆಸಿದ್ದಾರೆ.

ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಮೀಟಿಂಗ್ ನಡೆಸಿರೋ ಕಾಂಗ್ರೆಸ್ ಶಾಸಕರು, ಸಂಸದರು ಮೈತ್ರಿ ಸರಕಾರಕ್ಕೆ ಶಾಕ್ ಕೊಡಲು ಪ್ಲಾನ್ ರೂಪಿಸುತ್ತಿದ್ದಾರೆ.

ಡೈರಿ ಚುನಾವಣೆಯಲ್ಲೂ ಕಾಂಗ್ರೆಸ್ ನವರಿಗೆ ಜೆಡಿಎಸ್ ಅವಕಾಶ ಕೊಡೋದಿಲ್ಲ ಅಂದ್ರೆ ಏನರ್ಥ...? ಈ ದಬ್ಬಾಳಿಕೆಯ ನ್ನು ಸಹಿಸಿಕೊಂಡು ಹೋಗೋದು ಬೇಡ. ಸಿಎಂ ಎಚ್ಡಿಕೆ ಎಲ್ಲವೂ ಗೊತ್ತಿದ್ದೂ ಕೂಡ ಆಟವಾಡಿದ್ದಾರೆ.

ನಿನ್ನೆ ನಮ್ಮ ಮುಂದೆ ಯಾಕೆ ಒಪ್ಪಿಕೊಳ್ಳಬೇಕಿತ್ತು...? ಬಮೂಲ್‌ ಗೂ ರೇವಣ್ಣಗೂ ಏನಿದೆ ಸಂಬಂಧ...? ಬಮೂಲ್ ಮೇಲೆ ರೇವಣ್ಣ ಯಾಕೆ ದಬ್ಬಾಳಿಕೆ ಮಾಡಲು ಹೊರಟಿದ್ದಾರೆ..? ಹೀಗಂತ ಕೃಷ್ಣಭೈರೇಗೌಡ, ಎಸ್ಟಿಎಸ್ ನೇತೃತ್ವದ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಆಕ್ರೋಶ ಹಾಕಿದ್ದು, ಸಂಸದರಿಂದಲೂ ತೀವ್ರ ಬೇಸರ ವ್ಯಕ್ತವಾಗಿದೆ ಎನ್ನಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ