ವಿಧಾನಸಭೆ ಚುನಾವಣೆಗೆ ಪೂರ್ವ ಭಾವಿಯಾಗಿ ಎಸ್ಸಿ-ಎಸ್ಟಿ ಸಮುದಾಯದ ಐದು ಲಕ್ಷ ಜನರನ್ನು ಸೇರಿಸಿ ದೊಡ್ಡ ಸಮಾವೇಶ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೊಷ್ಠಿಯಲ್ಲಿ ಮಾತನಾಡದ ಮಾಜಿ ಡಿಸಿಎಂ ಪರಮೇಶ್ವರ್ ಪೂರ್ವಭಾವಿ ಸಭೆ ನಡೆಸಿ ಸಮಾವೇಶ ಮಾಡುವ ತೀರ್ಮಾನವನ್ನ ಮಾಡಿದ್ದೇವೆ.ಎಲ್ಲಾ ನಮ್ಮ ಪಕ್ಷದ ಎಸ್ಸಿ ಎಸ್ಟಿ ಮುಖಂಡರು ಇಡೀ ರಾಜ್ಯದ ಎಲ್ಲಾ ನಾಯಕರು ಸೇರಿದ್ವಿ, ಎಲ್ಲರೂ ಒಕ್ಕೊರಲಿನಿಂದ ತೀರ್ಮಾನ ಮಾಡಿದ್ದೇವೆ.ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಸ್ಸಿ ನಲ್ಲೇ 101 ಜಾತಿಗಳಿವೆ, ಎಸ್ಟಿ ಮಲ್ಲಿ 52 ವಿವಿಧ ಪಂಗಡಗಳಿವೆ ಇವರೆಲ್ಲರನ್ನೂ ಒಂದೇ ವೇದಿಕೆಗೆ ತರುವ ಪ್ರಯತ್ನ ಮಾಡ್ತಿದ್ದೇವೆ. ಚಿತ್ರದುರ್ಗದಲ್ಲಿ ಸಮಾವೇಶ ಆಯೋಜನೆ ಮಾಡಿದ್ದೇವೆ ಜನವರಿ 8 ನೇ ತಾರೀಕು, ಭಾನುವಾರ ಸಮಾವೇಶ ದಿನಾಂಕ ನಿಗಧಿ ಆಗಿದೆ.ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ,ರಾಜ್ಯದ ಉಸ್ತುವಾರಿ ಸುರ್ಜೇವಾಲ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಹರಿಪ್ರಸಾದ್, ಎಂಬಿ ಪಾಟೀಲ್ ಸೇರಿದಂತೆ ಎಲ್ಲಾ ನಾಯಕರು ಸೇರಲಿದ್ದಾರೆ.ಇನ್ನೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮೂವರನ್ನೂ ಆಹ್ವಾನಿಸಿದ್ದೇವೆ.ಮೂವರಲ್ಲಿ ಯಾರಾದ್ರೂ ಒಬ್ಬರು ಭಾಗಿಯಾಗಬೇಕು ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.