ದಂಡುಪಾಳ್ಯ ಗ್ಯಾಂಗ್ ಗಲ್ಲುಶಿಕ್ಷೆಯನ್ನ ಜೀವಾವಧಿಗೆ ಇಳಿಸಿದ ಹೈಕೋರ್ಟ್

ಸೋಮವಾರ, 4 ಸೆಪ್ಟಂಬರ್ 2017 (18:52 IST)
ದಂಡುಪಾಳ್ಯ ಹೆಸರು ಹೇಳಿದರೆ ಜನ ಬೆಚ್ಚಿ ಬೀಳುತ್ತಾರೆ. ಇದಕ್ಕೆ ಕಾರಣ ಅಲ್ಲಿ ಒಂದಾನೊಂದು ಕಾಲದಲ್ಲಿ ನೆಲೆಸಿದ್ದರೆನ್ನಲಾದ ಕುಖ್ಯಾತ ಹಂತಕರು. ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಮನೆಗೆ ನುಗ್ಗಿ ಬರ್ಬರವಾಗಿ ಕೊಂದು ಮನೆಯನ್ನ ದೋಚುತ್ತಿದ್ದ ಹಂತಕರಿಗೆ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು. ಇದೀಗ, ಗಲ್ಲುಶಿಕ್ಷೆಯನ್ನ ಜೀವಾವಧಿಗೆ ಇಳಿಸಲಾಗಿದೆ.

ಸುಧಾಮಣಿ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯ ದಂಡುಪಾಳ್ಯ ಗ್ಯಾಂಗ್`ನ ಲಕ್ಷ್ಮೀ, ಮುನಿತಿಮ್ಮ, ವೆಂಕಟೇಶ್ ಮತ್ತು ನಲ್ಲ ತಿಮ್ಮನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇದನ್ನ ಪ್ರಶ್ನಿಸಿ ಹಂತಕರು ಹೈಕೋರ್ಟ್ ಮೆಟ್ಟಿಲೇರಿದ್ದರು.ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಗಲ್ಲುಶಿಕ್ಷೆಯನ್ನ ಜೀವಾವಧಿಗೆ ಇಳಿಸಿ ತೀರ್ಪು ನೀಡಿದೆ.

ಪಶುಗಳಂತೆ ಮನುಷ್ಯರನ್ನ ಕೊಂದು ಹಾಕುತ್ತಿದ್ದ ದಂಡುಪಾಳ್ಯ ಹಂತಕರು ಗಲ್ಲು ಶಿಕ್ಷೆಯಿಂದ ಪಾರಾದೆವೆಂದು ನಿಟ್ಟುಸಿರು ಬಿಡುವಂತಿಲ್ಲ. ಇನ್ನೂ ಮೂರು ಪ್ರಕರಣಗಳ ತೀರ್ಪಿ ಹೈಕೋರ್ಟ್`ನಿಂದ ಹೊರಬೀಳಬೇಕಿದೆ.ಈ ಪ್ರಕರಣಗಳಲ್ಲಿ ಯಾವ ತೀರ್ಪು ಬರುತ್ತೋ ಕಾದುನೋಡಬೇಕಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ