ಯುಪಿಎ ಸರ್ಕಾರ ಮುಂಬೈ ದಾಳಿ ಬಳಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕೆಂದಿತ್ತು, ಅಮೆರಿಕಾ ಬೇಡ ಎಂದಿತು: ಪಿ ಚಿದಂಬರಂ

Krishnaveni K

ಮಂಗಳವಾರ, 30 ಸೆಪ್ಟಂಬರ್ 2025 (12:50 IST)
ನವದೆಹಲಿ: 26/11 ರ ಮುಂಬೈ ದಾಳಿ ಬಳಿಕ ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕೆಂದಿದ್ದೆವು. ಆದರೆ ಅಮೆರಿಕಾ ಬೇಡ ಎಂದಿತು ಎಂದು ಯುಪಿಎ ಅವಧಿಯಲ್ಲಿ ಗೃಹಸಚಿವರಾಗಿದ್ದ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇಂದು ಆಪರೇಷನ್ ಸಿಂಧೂರ್ ಬಳಿಕ ಅಮೆರಿಕಾ ಮಾತು ಕೇಳಿ ಮೋದಿ ಸರ್ಕಾರ ಪಾಕಿಸ್ತಾನದ ವಿರುದ್ಧ ಯುದ್ಧ ನಿಲ್ಲಿಸಿತು ಎಂದು ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಮೋದಿ ಸರ್ಕಾರ ಡೊನಾಲ್ಡ್ ಟ್ರಂಪ್ ರ ಕೈಗೊಂಬೆ ಎಂದೆಲ್ಲಾ ರಾಹುಲ್ ಟೀಕೆ ನಡೆಸಿದ್ದರು.

ಆದರೆ ಯುಪಿಎ ಅವಧಿಯಲ್ಲಿ ಅಮೆರಿಕಾ ಯುದ್ಧ ಬೇಡ ಎಂದಿದ್ದಕ್ಕೆ ಅಂದಿನ ಮನಮೋಹನ್ ಸಿಂಗ್ ಸರ್ಕಾರ ಕನಷ್ಠ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವುದನ್ನೂ ಮಾಡಿಲ್ಲ ಎಂದು ಬಿಜೆಪಿ ಈಗ ಭಾರೀ ಟೀಕೆ ನಡೆಸಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪಿ ಚಿದಂಬರಂ ಹೀಗೊಂದು ಹೇಳಿಕೆ ನೀಡಿದ್ದಾರೆ. ನಾವೂ ಅಂದು ಪಾಕಿಸ್ತಾನದ ಮೇಲೆ ದಾಳಿ ಮಾಡೋಣ ಎಂದುಕೊಂಡಿದ್ದೆವು. ಆದರೆ ವಿದೇಶಾಂಗ ಇಲಾಖೆ ಅದಕ್ಕೆ ತಯಾರಿರಲಿಲ್ಲ. ಅಮೆರಿಕಾ ಯುದ್ಧ  ಬೇಡ ಎಂದಿತ್ತು. ಹೀಗಾಗಿ ಸುಮ್ಮನಾದೆವು ಎಂದು ಪಿ ಚಿದಂಬರಂ ಹೇಳಿದ್ದಾರೆ. ಅವರ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ