ದಶಪಥ ಹೆದ್ದಾರಿ 2025ರ ಆಗಸ್ಟ್ ವೇಳೆಗೆ ಸಿದ್ಧ : ಗಡ್ಕರಿ

ಸೋಮವಾರ, 26 ಡಿಸೆಂಬರ್ 2022 (08:20 IST)
ಬೆಂಗಳೂರು : ನೆಲಮಂಗಲ-ತುಮಕೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು 10 ಪಥದ ಹೆದ್ದಾರಿಯನ್ನಾಗಿ ವಿಸ್ತರಿಸುವ ಯೋಜನೆಯ ಮೊದಲ ಹಂತದ ಕಾಮಗಾರಿ ನಡೆಯುತ್ತಿದ್ದು,
 
ಇದು 2025ರ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸುಮಾರು 844 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು-ತುಮಕೂರು ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, 44.04 ಕಿ.ಮೀ ದೂರದ ಹೆದ್ದಾರಿ 3 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ರಾಜ್ಯಸಭಾ ಅಧಿವೇಶನದಲ್ಲಿ ಮಾತನಾಡಿದ ಗಡ್ಕರಿ, ರಾಷ್ಟ್ರೀಯ ಹೆದ್ದಾರಿ 48ರ 29.5 ಕಿ.ಮೀ ನಿಂದ 75 ಕಿ.ಮೀ ವರೆಗಿನ ತುಮಕೂರು ಬೈಪಾಸ್ ಸೇರಿದಂತೆ ನೆಲಮಂಗಲದಿಂದ ತುಮಕೂರು ಭಾಗದ 6 ಪಥಗಳನ್ನು 2 ಹಂತಗಳಾಗಿ ವಿಂಗಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ