ನವದೆಹಲಿ : ಲೈಂಗಿಕತೆಗೆ ಒಪ್ಪಿಗೆಯ ವಯಸ್ಸನ್ನು ಕಡಿಮೆ ಮಾಡುವ ಯಾವುದೇ ಯೋಜನೆಯನ್ನು ಕೇಂದ್ರ ಹೊಂದಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.
ಈ ವಯಸ್ಸನ್ನು 18 ರಿಂದ 16 ವರ್ಷಕ್ಕೆ ಬಸಲಾಯಿಸುವ ಕುರಿತು ರಾಜ್ಯಸಭೆಯಲ್ಲಿ ಸಿಪಿಐ ಸಂಸದ ಬಿನೋಯ್ ವಿಶ್ವಂ ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಲಿಖಿತ ಉತ್ತರ ನೀಡಿದರು.
ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಪೋಸ್ಕೋ ಕಾಯಿದೆ 2012 ಅಡಿಯಲ್ಲಿ ವಯಸ್ಸು ನಿಗದಿಪಡಿಸಲಾಗಿದೆ. ಈ ಬಗ್ಗೆ ಪ್ರಶ್ನೆ ಉದ್ಭವಿಸುವುದೇ ಇಲ್ಲ ಎಂದು ತಿಳಿಸಿದರು.
ವಿಶೇಷ ನ್ಯಾಯಾಲಯದ ಮುಂದೆ ಯಾವುದೇ ವಿಚಾರಣೆಯ ಇಂತಹ ಪ್ರಶ್ನೆ ಉದ್ಭವಿಸಿದರೆ, ಅಂತಹ ಪ್ರಶ್ನೆಯನ್ನು ನ್ಯಾಯಾಲಯವು ನಿರ್ಧರಿಸುತ್ತದೆ ಎಂದು ಹೇಳಿದರು.