ರಾತ್ರಿ ಮಲಗಿದ್ದ ಅತ್ತೆಯನ್ನೇ ಜಜ್ಜಿ ಕೊಂದ ಸೊಸೆ
ಅತ್ತೆ-ಸೊಸೆ ನಡುವೆ ಪ್ರತಿನಿತ್ಯ ಹೊಂದಾಣಿಕೆಯಿಲ್ಲದೇ ಜಗಳವಾಗುತ್ತಿತ್ತು. ಇದೇ ಕೋಪದಲ್ಲಿ 38 ವರ್ಷದ ಸೊಸೆ ರಾತ್ರಿ ಮಲಗಿದ್ದ ಅತ್ತೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾಳೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತ್ತೆ-ಸೊಸೆ ನಡುವಿನ ಹೊಂದಾಣಿಕೆ ಕೊರತೆಯಿಂದಾದ ವೈಮನಸ್ಯದಿಂದಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.