ಮುಸ್ಲಿಮರ ನಮಾಜಿಗೂ ಪರ್ಮಿಷನ್ ಬೇಕು: ಏನೋ ಮಾಡಲು ಹೋಗಿ ಏನೋ ಆಯ್ತು ಎಂಬ ಪಬ್ಲಿಕ್

Krishnaveni K

ಮಂಗಳವಾರ, 21 ಅಕ್ಟೋಬರ್ 2025 (09:09 IST)
Photo Credit: X
ಬೆಂಗಳೂರು: ಆರ್ ಎಸ್ಎಸ್ ಚಟುವಟಿಕೆಗಳಿಗೆ ಬ್ರೇಕ್ ಹಾಕುತ್ತೇವೆ ಎಂದು ಹೊರಟ ಕಾಂಗ್ರೆಸ್ ಸರ್ಕಾರದ ಕತೆ ಈಗ ಏನೋ ಮಾಡಲು ಹೋಗಿ ಏನೋ ಆಯ್ತು ಎಂಬ ಸ್ಥಿತಿಯಾಗಿದೆ.

ಆರ್ ಎಸ್ಎಸ್ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಸರ್ಕಾರ ಖಾಸಗಿ ಸಂಘಟನೆಗಳ ಕಾರ್ಯಕ್ರಮಗಳನ್ನು ಆಯೋಜಿಸಲು ಇನ್ನು ಮುಂದೆ ಸರ್ಕಾರದ ಅನುಮತಿ ಪಡೆಯಬೇಕು ಎಂದು ನಿಯಮ ರೂಪಿಸಿತು. ಇದರ ಮುಖ್ಯ ಟಾರ್ಗೆಟ್ ಆರ್ ಎಸ್ಎಸ್ ನಿಯಂತ್ರಿಸುವುದು ಎಂದು ಎಲ್ಲರಿಗೂ ಗೊತ್ತಿರುವಂತಹದ್ದೇ.

ಆದರೆ ಇದೇ ವೇಳೆ ಕೇವಲ ಆರ್ ಎಸ್ಎಸ್ ಮಾತ್ರ ಯಾಕೆ, ಮುಸ್ಲಿಮರ ನಮಾಜ್ ಗೂ ಇನ್ನು ರಸ್ತೆಗಳಲ್ಲಿ ಸಾರ್ವಜನಿಕ ಮೈದಾನಗಳಲ್ಲಿ ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದ್ದವು. ಹೀಗಾಗಿ ಸರ್ಕಾರ ಈಗ ಮುಸ್ಲಿಮರನ್ನು ಅನಿವಾರ್ಯವಾಗಿ ಎದುರು ಹಾಕಿಕೊಳ್ಳಬೇಕಾಗಿದೆ.

ಕೇವಲ ಆರ್ ಎಸ್ಎಸ್ ಗೆ ಮಾತ್ರ ಎಂದು ಹೇಳುವಂತಿಲ್ಲ. ಹೀಗಾಗಿ ನಮಾಜ್ ಗೂ ಪರ್ಮಿಷನ್ ಪಡೆಯಬೇಕು ಎಂದು ಆದೇಶ ನೀಡಿದೆ. ಆದರೆ ಇದರಿಂದ ಪರೋಕ್ಷವಾಗಿ ಮುಸ್ಲಿಮರ ಅಸಮಾಧಾನವನ್ನೂ ಕಟ್ಟಿಕೊಂಡಂತಾಗಿದೆ. ಹೀಗಾಗಿ ಈಗ ಆರ್ ಎಸ್ಎಸ್ ಚಟವಟಿಕೆಗಳಿಗೆ ನಿಯಂತ್ರಣ ಹೇರಲು ಹೋಗಿ ಇನ್ನೇನೋ ಆಗಿದೆ ಎಂಬ ಸ್ಥಿತಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ