ಕಣ್ಣೀರು ಹಾಕಿದ ಡಿಸಿ : ಪ್ರಲ್ಹಾದ ಜೋಶಿ ಮಾಡಿದ್ದೇನು?

ಬುಧವಾರ, 2 ಅಕ್ಟೋಬರ್ 2019 (17:52 IST)
ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ನೆರೆದಿದ್ದ ಸಭೆಯಲ್ಲಿ  ಕಣ್ಣೀರು ಹಾಕಿದ ಘಟನೆ ನಡೆದಿದೆ.‌

ಹುಬ್ಬಳ್ಳಿ ನಗರದ ಲ್ಯಾಮಿಂಗ್ಟನ್  ಪ್ರೌಢಶಾಲೆಯಲ್ಲಿ ಜಿಲ್ಲಾಡಾಳಿತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಹಾಗೂ ಬೃಹತ್ ಪ್ಲಾಸ್ಟಿಕ್ ಸಂಗ್ರಹಣಾ ಅಭಿಯಾನ‌ ಹಮ್ಮಿಕೊಳ್ಳಲಾಗಿತ್ತು. ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾಧಿಕಾರಿ ದೀಪಾ ಚೋಳನ‌ ಅವರ ಮೇಲೆ ಏಕಾಏಕಿಯಾಗಿ ತರಾಟೆಗೆ ತಗೆದುಕೊಂಡರು.

ಕಾರ್ಯಕ್ರಮ ಆಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ‌ ದೀಪಾ ಚೋಳನ್ ಅವರನ್ನು ಸಭೆಯಲ್ಲಿಯೇ ಪ್ರಹ್ಲಾದ್ ಜೋಶಿ ದರ್ಪ ಮೆರೆದಿದ್ದಾರೆ. ಜಿಲ್ಲಾಧಿಕಾರಿಗಳು ಸಮಜಾಯಿಸಿ ನೀಡಲು ‌ಅವಕಾಶ ನೀಡದೆ ಮನಬಂದಂತೆ ಬೈದಿದ್ದಾರೆ. ಇಷ್ಟಲ್ಲದೆ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರನ್ನು ಕರೆಸಿ ಅವರನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಆದ್ರೆ ಇದೆಲ್ಲವನ್ನು ನೋಡುತ್ತ ಮಧ್ಯದಲ್ಲಿ ‌ಕುಳಿತ್ತಿದ್ದ ಬೃಹತ್ ಹಾಗೂ ಮಧ್ಯಮ ‌ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮೂಕವಿಸ್ಮಿತರಾಗಿದ್ದರು.‌ ಯಾರಿಗೂ ಏನನು ಹೇಳದೆ ಮೌನಕ್ಕೆ ಶರಣಾಗಿದ್ದರು. 

ಸಾರ್ವಜನಿಕ ಸಭೆಯಲ್ಲಿಯೇ ಕೇಂದ್ರ ಸಚಿವರಿಂದ ‌ಬೈಗುಳ ತಿಂದ ಜಿಲ್ಲಾಧಿಕಾರಿಗಳು‌ ಕಣ್ಣೀರು ಹಾಕಿದರು.  ಜಿಲ್ಲೆಯಲ್ಲಿ ದೀಪಾ ಚೋಳನ್ ಮೇಲೆ ದರ್ಪ ತೋರಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಜನರ ಪ್ರಶ್ನೆಯಾಗಿದೆ.‌

ಈ ಸಂದರ್ಭದಲ್ಲಿ ಜಿ.ಪಂ ಸಿ.ಇ.ಓ ಡಾ.ಬಿ.ಸಿ‌.ಸತೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಡಿ.ಡಿ.ಪಿ.ಐ ಗಜಾನನ ಮನ್ನಿಕೇರಿ ಸೇರಿದಂತೆ ಇತರೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ