ಶಾಸಕರನ್ನು ಝಾಡಿಸಿದ ಡಿಸಿ : ನನ್ನನ್ನು ಯಾರೂ ಪ್ರಶ್ನೆ ಮಾಡಬಾರ್ದು ಎಂದ ಎಂಎಲ್ಎ
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಶಾಸಕರ ಕ್ರಮಕ್ಕೆ ಡಿಸಿ ಕೆಂಡಾಮಂಡಲರಾಗಿರೋ ಘಟನೆ ನಡೆದಿದ್ದು, ಡಿಸಿ-ಶಾಸಕರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗ್ತಿದೆ.
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಅವರು ರೇಣುಕಾಚಾರ್ಯ ಕ್ರಮಕ್ಕೆ ಗರಂ ಆಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಎಲ್ಲಿದ್ದಿರೋ ಅಲ್ಲೇ ಜಾಗೃತಿ ಮೂಡಿಸಿ ಅಂತ ಡಿಸಿ ಖಡಕ್ಕಾಗಿ ಹೇಳಿದ್ದಾರೆ.
ನಾನು ಎಂ ಎಲ್ ಎ. ನಾನು ಎಲ್ಲಿಯೇ ಹೋದರೂ ನನ್ನನ್ನು ಯಾರೂ ಪ್ರಶ್ನೆ ಮಾಡಬಾರದು. ಆ ಅಧಿಕಾರ ಯಾರಿಗೂ ಇಲ್ಲ ಅಂತ ಶಾಸಕ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.