ಕೊರೊನಾ ಕೇಸ್ : ಸಂತಸದ ಸಂಗತಿ ಎಂದ ಸಚಿವ
ಕೊರೊನಾ ವೈರಸ್ ವಿಷಯವಾಗಿ ಸಚಿವರೊಬ್ಬರು ಸಂತಸದ ವಿಷಯ ಹಂಚಿಕೊಂಡಿದ್ದಾರೆ.
ಮುಂಜಾಗ್ರತಾ ಕ್ರಮವನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೇಷ್ಮೆ ಕೃಷಿಕರು ಭಯಪಡುವ ಅಗತ್ಯವಿಲ್ಲ, ರೇಷ್ಮೆ ಗೂಡನ್ನು ಹೆಚ್ಚಿನ ಬೆಲೆಗೆ ಸರ್ಕಾರ ಖರೀದಿ ಮಾಡಲು ನಿರ್ಧರಿಸಿದೆ. ರಾಜ್ಯದ ದ್ರಾಕ್ಷಿ ಬೆಳೆಗಾರರನ್ನು ಈಗಿನ ಸಂಕಷ್ಟದಿಂದ ಹೊರತರಲು ಸರ್ಕಾರ ಮುಂದಾಗಿದೆ ಎಂದಿದ್ದಾರೆ.