ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ವಿಚಾರಕ್ಕೆ ಮಾಜಿ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ್ ರೈ ಹೇಳಿಕೆ ನೀಡಿದ್ದು, ಸಸಿಕಾಂತ್ ಸೆಂಥಿಲ್ ಅವರಿಗೆ ದೇಶದ ಆಡಳಿತ ಯಂತ್ರದ ಬಗ್ಗೆ ಅಸಮಾಧಾನವಿದೆ. ಸೆಂಥಿಲ್ ಒಬ್ಬ ಪ್ರಾಮಾಣಿಕ ಮತ್ತು ಜನಪರ ಜಿಲ್ಲಾಧಿಕಾರಿಯಾಗಿದ್ದಾರೆ.
ಸೆಂಥಿಲ್ ರಾಜೀನಾಮೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿಲ್ಲ. ಡಿ.ಕೆ.ರವಿ ಆತ್ಮಹತ್ಯೆ ಆದಾಗ ರಾಜಕೀಯ ಮಾಡಿದ್ದು ಬಿಜೆಪಿಯವರು.
ನಾವು ಉತ್ತಮ ಅಧಿಕಾರಿ ಸೆಂಥಿಲ್ ಇರಬೇಕು ಅಂತ ಪ್ರತಿಭಟನೆ ಮಾಡಿದ್ದೇವೆ. ಸಾವಿನಲ್ಲಿ ಕೀಳು ಮಟ್ಟದ ರಾಜಕೀಯ ಈ ಜಿಲ್ಲೆಯಲ್ಲಿ ಮಾಡಿದ್ದು ಬಿಜೆಪಿಯವರು. ಮರಳು ವಿಚಾರದಲ್ಲಿ ಡಿಸಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದಾರೆ.
ಸೆಂಥಿಲ್ ಪ್ರಾಮಾಣಿಕತೆ ಬಗ್ಗೆ ಈವರೆಗೆ ಯಾರೂ ಮಾತನಾಡಿಲ್ಲ. ಆದ್ರೆ ಇನ್ನು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ಇಂಥ ಕುಕೃತ್ಯ ಶುರುವಾಗುತ್ತದೆ ಎಂದ್ರು.
ಲಾರಿ ಮಾಲಕರ ಸಂಘ ಸೇರಿ ಬೇರೆ ರೀತಿಯಲ್ಲಿ ಆರೋಪಕ್ಕೆ ಸಂಘಟನೆಗಳನ್ನ ಬಳಸಲಾಗುತ್ತದೆ. ಸಸಿಕಾಂತ್ ಸೆಂಥಿಲ್ ಭ್ರಷ್ಟ ಎನ್ನುವುದನ್ನ ನಾನು ಒಪ್ಪಲ್ಲ, ಇದು ನಿರಾಧಾರ ಎಂದ್ರು.
ಮೊನ್ನೆಯವರೆಗೆ ಬಿಜೆಪಿ ಮುಖಂಡರು ಕೂಡ ಸೆಂಥಿಲ್ ಒಳ್ಳೆಯ ಅಧಿಕಾರಿ ಅಂದಿದ್ದಾರೆ. ಈಗ ಅವರನ್ನ ತಪ್ಪಿತಸ್ಥರನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ ಅಂತ ಹೇಳಿದ್ದಾರೆ.