ರಾಜ್ಯದ ನೆರೆ ಪೀಡಿತ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿಲ್ಲ. ಇನ್ನು, ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡದ ಯಡಿಯೂರಪ್ಪ ಹೈಕಮಾಂಡ್ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ,
ಹೀಗಂತ ಮಾಜಿ ಸಚಿವ ಹೆಚ್. ಆಂಜನೇಯ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಾಗೂ ಸಿಎಂ ವಿರುದ್ಧ ಟೀಕೆ ಮಾಡಿದ್ದಾರೆ.
ಜಿಜೆಪಿ ವಿರುದ್ಧ ವ್ಯಂಗ್ಯ, ಟೀಕೆ ಮುಂದುವರಿಸಿರೋ ಮಾಜಿ ಸಚಿವ, ವಾಮಮಾರ್ಗದಲ್ಲಿ ಜಿಜೆಪಿ ಸರಕಾರ ರಚನೆ ಮಾಡಿದೆ.
ಖಾತೆ ಹಂಚಿಕೆ ಮಾಡಲು ಇನ್ನೂ ಎಷ್ಟು ದಿನ ಬೇಕು? ಅಂತ ಪ್ರಶ್ನೆ ಮಾಡಿದ್ರು.
ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ನೆಪದಲ್ಲಿ ನಾಟಕ ಮಾಡ್ತಾ ಇದ್ದಾರೆ ಅಂತ ದೂರಿದ್ರು.
ಉತ್ತರ ಕರ್ನಾಟಕದ ನೆರೆ ಸಂಕಷ್ಟಕ್ಕೆ ರಾಜ್ಯ ಮತ್ತು ಕೇಂದ್ರ ಸ್ಪಂದಿಸಬೇಕು. ಯಾರಿಗೆ ಯಾವ ಖಾತೆ ಕೊಡ್ತಾರೊ ಯಾರಿಗೆ ರಾಜೀನಾಮೆ ಮಾಡಿಸ್ತಾರೋ ಗೊಂದಲಮಯವಾಗಿದೆ.
ಲೊಕಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗ ವನ್ನು ದುರ್ಬಳಕೆ ಮಾಡಿದ್ದಾರೆ. ರಾಜ್ಯದಲ್ಲಿ ರಾಜಕಿಯ ವ್ಯವಸ್ಥೆ ಹದಗೆಟ್ಟಿದೆ. ಮುಂದಿನ ಉಪ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ಜಿಜೆಪಿ ಸರಕಾರ ಸ್ಥಿರವಾಗಿ ಇರೋದು ಅನುಮಾನವಾಗಿದೆ ಅಂತ ಹೇಳಿದ್ರು.