ಶ್ರೀ ಶಿವಕುಮಾರ ಸ್ವಾಮೀಜಿ ಜೈವಿಕ ಉದ್ಯಾನದಲ್ಲಿ ಡಿಸಿಎಂ

ಬುಧವಾರ, 12 ಆಗಸ್ಟ್ 2020 (17:46 IST)
ನಾಡಿನ ಅಭಿವೃದ್ಧಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕಾಯಕದ ಮಾರ್ಗದರ್ಶನವನ್ನು ಮಾಡಿದ ಡಾ.ಶಿವಕುಮಾರಸ್ವಾಮೀಜಿಗಳ ಜೈವಿಕ ಉದ್ಯಾನಕ್ಕೆ ಚಾಲನೆ ನೀಡಲಾಗಿದೆ.


ಶ್ರೀ ಶಿವಕುಮಾರ್ ಶ್ರೀಗಳ ಹೆಸರಿನ ಜೈವಿಕ ಉದ್ಯಾನಕ್ಕೆ  ಚಾಲನೆ ನೀಡಿದ್ದು ಸಂತಸದ ವಿಚಾರ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಹಿಂದುಳಿದಿರುವ ಪ್ರದೇಶಗಳಲ್ಲಿ ಗ್ರಾಮೀಣಾಭಿವೃದ್ಧಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ವಿಜ್ಞಾನವನ್ನು ವೃತ್ತಿ, ಕಾಯಕದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದ್ದು, ಅಭಿವೃದ್ಧಿ ಸಾಧಿಸಲು ವಿಜ್ಞಾನವನ್ನು ಸಮರ್ಥವಾಗಿ ಅಳವಡಿಸಿಕೊಳ್ಳಬೇಕು ಎಂದರು.

ಕೋವಿಡ್ ನಿಂದಾಗಿ ಜನಜೀವನ ಬದಲಾವಣೆಯಾಗಿದ್ದು, ತಾತ್ಕಾಲಿಕವಾಗಿರುವ ಈ ಬದಲಾವಣೆಯನ್ನು ಸುಸ್ಥಿತಿಗೆ ತರಲು ಇದು ಅವಶ್ಯಕವಾಗಿದ್ದು, ಭಾರತ ಇದರಿಂದ ಬೇಗ ಹೊರಬರಲಿದೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ