ಹಿರಿಯ ನಟಿ ಲೀಲಾವತಿ ನಿಧನಕ್ಕೆ ಸಂತಾಪ ಸೂಚನೆ ನಿರ್ಣಯವನ್ನ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕೆಲವರು ಬದುಕಿದ್ದಾಗಲೂ ಸತ್ತಂತೆ ಇರ್ತಾರೆ, ಕೆಲವರು ಸತ್ತ ಬಳಿಕವೂ ಬದುಕಿರುತ್ತಾರೆ ಎಂಬುದಕ್ಕೆ ಉದಾಹರಣೆ ಇದೆ ಎಂದು ಲೀಲಾವತಿ ಅವರ ಜೀವನ ಶೈಲಿಯನ್ನ ಉದಾಹರಣೆ ನೀಡಿದ್ರು.
ಇನ್ನು, ಅವರ ಜೊತೆಗಿನ ಕೆಲವು ನೆನಪುಗಳನ್ನ ಹಂಚಿಕೊಂಡ ಡಿಕೆಶಿ, ಜೈಲಿನಲ್ಲಿ ಶೂಟಿಂಗ್‌ಗೆ ಅನುಮತಿ ಪಡೆಯೋ ವಿಚಾರವಾಗಿ ನನ್ನ ಬಳಿ ಲೀಲಾವತಿ ಅವರು ಪುತ್ರನ ಜೊತೆಗೆ ಬಂದಿದ್ದರು. ಆ ವೇಳೆ ನಾನು ಅನುಮತಿ ಕೊಡಿಸಿದೆ ಎಂದು ನೆನಪಿಸಿಕೊಂಡ್ರು.
ಇನ್ನು, ಲೀಲಾವತಿ ಅವರು ಬಹಳ ಕಷ್ಟವನ್ನು ಎದುರಿಸಿ, ಬದುಕಿದ್ದಾರೆ. ಅವರು ಅಜಾತಶತ್ರು ಎಂದು ಹೆಮ್ಮೆಪಟ್ರು. ಜೊತೆಗೆ ನನ್ನ ರಾಜಕಾರಣದ ಬದುಕಿನಲ್ಲಿ ಲೀಲಾವತಿ ಅವರು ಕಟ್ಟಿಸಿದ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿದ್ದು, ನನ್ನ ಭಾಗ್ಯ ಎಂದು ಹೆಮ್ಮೆಯ ಮಾತುಗಳನ್ನಾಡಿದ್ರು.