ಎಂಪಿ ಟಿಕೆಟ್ ನಿರಾಕರಿಸಿದ ಶಿವಣ್ಣ ನಿರ್ಧಾರ ಮೆಚ್ಚಿದ ಫ್ಯಾನ್ಸ್

ಸೋಮವಾರ, 11 ಡಿಸೆಂಬರ್ 2023 (08:20 IST)
ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ದಿಸುವಂತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಫರ್ ನೀಡಿದ್ದರು.

ಡಿಕೆ ಶಿವಕುಮಾರ್ ನೀಡಿದ್ದ ಆಫರ್ ನ್ನು ಶಿವಣ‍್ಣ ತಿರಸ್ಕರಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ರಾಜಕೀಯ ನಮಗೆ ಬೇಡ. ನಮ್ದೇನಿದ್ರೂ ಬಣ್ಣ ಹಚ್ಚೋದು, ಆಕ್ಟಿಂಗ್ ಮಾಡೋದು ಅಷ್ಟೇ ಎಂದಿದ್ದಾರೆ.

ಸ್ವತಃ ಡಿಕೆ ಶಿವಕುಮಾರ್ ನೇರವಾಗಿ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಆಫರ್ ನೀಡಿದ್ದರು. ಆದರೆ ತನಗೆ ಸಿಕ್ಕ ಬಿಗ್ ಆಫರ್ ನ್ನು ಶಿವಣ್ಣ ನಿರಾಕರಿಸಿದ್ದಾರೆ. ಇದಕ್ಕೆ ಮೊದಲು ವಿಧಾನಸಭೆ ಚುನಾವಣೆಯಲ್ಲಿ ಶಿವಣ್ಣ ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡಿದ್ದರು. ಶಿವಣ್ಣ ಮತ್ತು ಡಿಕೆಶಿ ನಡುವೆ ಉತ್ತಮ ಸ್ನೇಹ ಸಂಬಂಧವಿದೆ. ಹೀಗಾಗಿ ಶಿವರಾಜ್ ಕುಮಾರ್ ಗೆ ಎಂಪಿ ಟಿಕೆಟ್ ನೀಡುವ ಆಫರ್ ನೀಡಿದ್ದರು.

ಆದರೆ ಡಾ.ರಾಜ್ ಕುಟುಂಬ ಮೊದಲಿನಿಂದಲೂ ಸಕ್ರಿಯ ರಾಜಕಾರಣದಿಂದ ದೂರವೇ ಇದ್ದಾರೆ. ಹೀಗಾಗಿ ಈಗಲೂ ತಮ್ಮ ಕುಟುಂಬ ನಿಯಮಕ್ಕೆ ಬದ್ಧರಾಗಿ ರಾಜಕೀಯ ಬೇಡ ಎಂದಿದ್ದಾರೆ.

ಶಿವಣ್ಣ ಎಂಪಿ ಟಿಕೆಟ್ ನಿರಾಕರಿಸಿದ್ದಕ್ಕೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಿದ್ದಾಗಲೇ ಅನೇಕ ಅಭಿಮಾನಿಗಳು ನಿಮಗೆ ರಾಜಕೀಯ ಬೇಡ ಶಿವಣ‍್ಣ ಎಂದು ಆಗ್ರಹಿಸಿದ್ದರು. ಇದೀಗ ಎಂಪಿ ಟಿಕೆಟ್ ನಿರಾಕರಿಸಿದ್ದಕ್ಕೂ ಸೋಷಿಯಲ್ ಮೀಡಿಯಾಗಳ ಮುಖಾಂತರ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ