ಮೆಕ್ಡೊನಾಲ್ಡ್ ನ ತಂಪುಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆ: ಬೀಗ ಜಡಿದ ಅಧಿಕಾರಿಗಳು!

ಮಂಗಳವಾರ, 24 ಮೇ 2022 (20:21 IST)
ಮೆಕ್ ಡೊನಾಲ್ಡ್ ನಲ್ಲಿ ಗ್ರಾಹಕರೊಬ್ಬರಿಗೆ ನೀಡಲಾದ ತಂಪು ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಅಹಮದಾಬಾದ್ ನ ಅಂಗಡಿಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಮೆಕ್ ಡೊನಾಲ್ಡ್ ಗೆ ಹೋಗಿದ್ದ ಇಬ್ಬರು ಯುವಕರು ಕೋಕ್ ಪಡೆದಿದ್ದರು. ಇಬ್ಬರು ಕುಡಿಯುತ್ತಿರುವಾಗ ಸತ್ತ ಹಲ್ಲಿ ಕಂಡು ಹೌಹಾರಿದ್ದಾರೆ.
ಭಾರ್ಗವ ಜೋಷಿ ಎಂಬ ಗ್ರಾಹಕ ಈ ಘಟನೆಯ ಫೋಟೊ ತೆಗೆದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಹಮದಾಬಾದ್ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಅಂಗಡಿ ಬಾಗಿಲು ಮುಚ್ಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ