ವೈದ್ಯರ ಎಡವಟ್ಟು: ಕೋಲಾರದಲ್ಲಿ 3 ತಿಂಗಳು ಹೆಣ್ಣು ಮಗು ಸಾವು

ಬುಧವಾರ, 14 ಜುಲೈ 2021 (14:19 IST)
ಮೂರು ತಿಂಗಳ ಚುಚ್ಚು ಮದ್ದು ಪಡೆದ ಹೆಣ್ಣು ಮಗು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಮೂರು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದಾಳೆ. ಇದರಿಂದಾಗಿ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. 
ಬೇವಹಳ್ಳಿ ಗ್ರಾಮದ ಅಂಜಲಿ ಹಾಗೂ ನಾಗರಾಜ್ ಎಂಬುವರಿಗೆ ಸೇರಿದ ಮೂರು ತಿಂಗಳ ಹೆಣ್ಣು ಮಗು ಇದಾಗಿದ್ದು, ನಿನ್ನೆ ಬೇವಹಳ್ಳಿ ಗ್ರಾಮದಲ್ಲಿ ಕೊರೊನಾ ವ್ಯಾಕ್ಸಿನ್ ಜೊತೆಗೆ ಮೂರು ತಿಂಗಳ ಲಸಿಕೆಯನ್ನ ಹಾಕುವ ಕಾರ್ಯಕ್ರಮವನ್ನೂ ಸಹ ಹಮ್ಮಿಕೊಳ್ಳಲಾಗಿತ್ತು, 
ಗ್ರಾಮದಲ್ಲಿ ಎಂಟು ಮಕ್ಕಳಿಗೆ ಚುಚ್ಚು ಮದ್ದು ನೀಡಿದ್ದ ಇದ್ರಲ್ಲಿ 7 ಮಕ್ಕಳು ಆರೋಗ್ಯವಾಗಿದ್ದಾರೆ, ಮೂರು ತಿಂಗಳ ಚುಚ್ಚು ಮದ್ದು ಹಾಕುವ ವೇಳೆ ಮಗುವಿಗೆ ಕೊರೊನಾ ಲಸಿಕೆ ಹಾಕಿ ಯಡವಟ್ಟು ಮಾಡಲಾಗಿದೆ ಎಂದು ಪೋಷಕರು ಹಾಗಾ ಗ್ರಾಮಸ್ಥರು ಆರೋಪಿಸಿದ್ದು, ಅಧಿಕಾರಿಗಳ ವಿರುದ್ದ ಹರಿಹಾಯ್ದಿದ್ದಾರೆ. 
ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅಧಿಕಾರಿಗಳಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ,

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ