ಕೊಬ್ಬರಿ ಬೆಲೆ ಇಳಿಕೆ

ಮಂಗಳವಾರ, 31 ಮೇ 2022 (19:33 IST)
ಗಗನಮುಖಿಯಾಗಿದ್ದ ಖಾದ್ಯ ತೈಲಗಳ ಬೆಲೆ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಇಳಿಸಿರುವುದು ನೇರವಾಗಿ ಅನ್ನದಾತರ ಮೇಲೆ ಪ್ರಭಾವ ಬೀರಿದೆ. ಸುಂಕ ಇಳಿಕೆ ನೀತಿಯಿಂದಾಗಿ ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಜನವರಿ, ಫೆಬ್ರವರಿಯಲ್ಲಿ ಕ್ವಿಂಟಾಲಿಗೆ 17,400 ರೂ. ಇದ್ದ ಉಂಡೆ ಕೊಬ್ಬರಿ ಇದೀಗ 13,500 ರೂ. ಅಂಚಿಗೆ ತಲುಪಿದೆ . ಕೆಲವೇ ದಿನಗಳಲ್ಲಿ ಬೆಂಬಲ ಬೆಲೆ 11 ಸಾವಿರ ರೂಪಾಯಿಗೆ ಇಳಿದರೂ ಆಶ್ಚರ್ಯವಿಲ್ಲ.ಒಟ್ಟಾರೆಯಾಗಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಯಾಗಿದೆ ಆದರೆ ಕೊಬ್ಬರಿ ಬೆಲೆ ಮಾತ್ರ ದಿನ ದಿಂದ ದಿನಕ್ಕೆ ಇಳಿಮುಖ ಕಾಣುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ