ಬಂಧಿತರನ್ನು ದೋಮೆರಾಜು, ವೆಂಕಟೇಶ್, ಮುನಿರಾಜು, ಬಾಲರಾಜು ಮತ್ತು ಜೋಸೆಫ್ ರಾಜು ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಬನ್ನೇರುಘಟ್ಟ ಮೂಲದವರಾಗಿದ್ದು ಅವರನ್ನು ನಿನ್ನೆ ರಾತ್ರಿ ಜಿಂಕೆ ಬೇಟೆಯಾಡಿ ಮರಳುತ್ತಿದ್ದ ಅವರು ರಾತ್ರಿ ಪಾಳಿಯಲ್ಲಿದ್ದ ಅರಣ್ಯ ಪಾಲಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ತಾಲೂಕಿನ ಎಣ್ಣೆಹೊಳೆ ಮೀಸಲು ಅರಣ್ಯದಲ್ಲಿ ಈ ದುರುಳರು ಜಿಂಕೆ ಬೇಟೆಯಾಡಿದ್ದು, ಬಂಧಿತರಿಂದ ಒಂದು ಸತ್ತ ಜಿಂಕೆ, ಎರಡು ಗನ್ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.