ಆರೋಗ್ಯ ಇಲಾಖೆಯಿಂದ ಖರೀದಿಸಿ ಪೂರೈಕೆ ಮಾಡುತ್ತಿರುವ ಎನ್-95 ಮಾಸ್ಕ್ ಪೂರೈಕೆಯಲ್ಲಿ ಲೋಪ

ಶುಕ್ರವಾರ, 17 ಸೆಪ್ಟಂಬರ್ 2021 (21:49 IST)
ಕಂಡುಬಂದಿದ್ದು, ಅವದಿ ಮುಗಿದ ಮಾಸ್ಕ್ ಪೂರೈಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪದ ನಂತರ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ,ಆರೋಗ್ಯ ಇಲಾಖೆಯಿಂದ ಪೂರೈಕೆಯಾದ ಮಾಸ್ಕ್ ಗಳನ್ನು ಪರಿಶೀಲಿಸಿದ್ದು, ಸದಸ್ಯರಿಗೆ ನೀಡಿದ‌ ಮಾಸ್ಕ್ ಗಳಿಗೆ ಸ್ಟಿಕ್ಕರ್ ಹಾಕಲಾಗಿದೆ.ಅವದಿ ಮುಗಿದ ದಿನಾಂಕಕ್ಕೆ ಸ್ಟಿಕ್ಕರ್ ಹಾಕಿ ಹೊಸ ದಿನಾಂಕ ಹಾಕಲಾಗಿದೆ ಹಾಗಾಗಿ ಕೂಡಲೇ ತನಿಖೆ ನಡೆಸಿ ಲೋಪಕ್ಕೆ ಕಾರಣರಾದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಶಾಸನ ಸಭೆಯಲ್ಲಿಯೇ ಹೀಗಾದರೆ ಹೊರಗಡೆ ಹೇಗೆ ನಡೆಯಬಹುದು ಹಾಗಾಗಿ ಕೂಡಲೇ ಕ್ರಮ ಕೈಗೊಳ್ಳಿ ಎಂದು ಸಭಾಪತಿ ಕೋಟಾ ಶ್ರೀನಿವಾಸ ಪೂಜಾರಿಗೆ ಸೂಚಿಸಿದರು. ಸಭಾಪತಿಗಳ ಸೂಚನೆಗೆ ಪ್ರತಿಕ್ರಿಯೆ ನೀಡಿದ ಸಭಾನಾಯಕರು,
ಕ್ರಮ ಕೈಗೊಂಡು ಮಾಹಿತಿಯನ್ನು ಸದನಕ್ಕೆ ನೀಡಿವುದಾಗಿ ಭರವಸೆ ನೀಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ