ಮಹಿಳೆಯರಿಗೆ ವಲಿಯದ ಲಕ್ಷ್ಮೀ ಯೋಜನೆ ಜಾರಿಗೆ ವಿಳಂಬ

ಬುಧವಾರ, 12 ಜುಲೈ 2023 (16:41 IST)
ಗೃಹಗಳಿಗೆ ಲಕ್ಷ್ಮೀ ಒಲಿಯುತ್ತಾಳೆ ಎಂಬದು ಪ್ರಶ್ನೆಗೆಯಾಗಿಯೆ ಉಳಿದಿದೆ. ನಿತ್ಯವೂ ನೂರಾರು ಗೊಂದಲಗಳು ಸರ್ಕಾರಕ್ಕೆ ಗ್ಯಾರಂಟಿ ತಲೆನೋವಾಗಿಕಾಡ್ತಿವೆ. ಸರ್ಕಾರ ಇದೆ 14 ರಂದು ಗೃಹಲಕ್ಷ್ಮೀ ಯೋಜನೆ ಜಾರಿಮಾಡಲು ಪ್ರತಿ ಜಿಲ್ಲೆಗಳಲ್ಲಿ ಪ್ರಜಾಪ್ರತಿನಿಧಿಗಳ ಮೂಲಕ ಸರ್ವೇ ಮಾಡೋಕೆ ಪ್ಲಾನ್ ಮಾಡಿಕೊಂಡಿತ್ತು. ಅದರ ಸಂಪೂರ್ಣ ಹೊಣೆಯನ್ನು ಜಿಲ್ಲಾ ಉಸ್ತುವಾರಿಗಳಿಗೆ ನೀಡುವುದಾಗಿ ತಿಳಿಸಿತ್ತು ಅಂದುಕೊಂಡಂತೆ ಎಲ್ಲವು ಆಗಿದ್ದರೆ ಆಗಸ್ಟ್ ನಿಂದ ಮಹಿಳೆಯರಿಗೆ ಲಕ್ಷ್ಮೀ ಕಲಿಯಬೇಕಿತ್ತು. ಆದ್ರೆ ಇದೀಗ ಮತ್ತೆ ಗೃಹಲಕ್ಷ್ಮಿಗೆ ಕಂಟಕ ಎದುರಾಗಿದೆ.ಜುಲೈ 14 ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸ್ವೀಕರಿಸಲು ಸರ್ಕಾರ ಸಜ್ಜಾಗಿತ್ತು. ಸರ್ಕಾರ ಮೂರು ಯೋಜನೆಗಳು ಜಾರಿ ಮಾಡಿದೆ ಉಚಿತ ಯೋಜನೆಗಳ ಖಚಿತ ಮಾಹಿತಿ ಸಿಗದ ಹಿನ್ನೆಲೆ ಸರ್ಕಾರಕ್ಕೆ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡೋಕೆ ಹಿಂದೇಟು ಹಾಕ್ತಿದ್ದೆ.. ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲುಸಲ್ಪ ಸಮಯ ಬೇಕಿದೆ. ಮನೆ ಕುಟುಂಬದ ಯಜಮಾನಿಗೆ 2 ಸಾವಿರ ರೂಪಾಯಿ ಹಾಕಬೇಕಿರುವುದರಿಂದ ಅವರ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮಯಾವಕಾಶ ಬೇಕಾಗಿದೆ. ಹಾಗಾಗಿ ಸ್ವಲ್ಪ ವಿಳಂಬವಾಗಿದೆ. ಆಗಸ್ಟ್ 16ರಿಂದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು ಮುಖ್ಯಮಂತ್ರಿ ಸಿದ್ದರಾಮಯ್ಯ ತೀಳಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ