ಖುಷಿ ತಂದ ಕಡಲೆ ಖರೀದಿ ಕೇಂದ್ರ- ವರ್ತಕರು ದಲ್ಲಾಳಿ ಕಾಟ ದೂರ

ಮಂಗಳವಾರ, 14 ಮಾರ್ಚ್ 2023 (16:01 IST)
ದಲ್ಲಾಳಿಗಳು ವ್ಯಾಪಾರಸ್ಥರ ಕೈಗೆ ಸಿಲುಕಿ ಮನಬಂದ ಬೆಲೆಗೆ ಬೆಳೆಗಳನ್ನು ಮಾರುತ್ತಿದ್ದ ರೈತರಿಗೆ ಇದೀಗ ಸರ್ಕಾರವೇ ತೆರೆದ ಬೆಂಬಲ ಬೆಲೆ ಯೋಜನೆಯ ಕಡಲೆ ಖರೀದಿ ಕೇಂದ್ರ ವರದಾನವಾಗಿದೆ.ಕುಂದಗೋಳ ಪಟ್ಟಣದ ಎಪಿಎಂಸಿಯಲ್ಲಿನ  ಕಡಲೆ ಖರೀದಿ ಕೇಂದ್ರಕ್ಕೆ ಈ ವರ್ಷವೇ ಅತ್ಯಧಿಕ 1460 ಅರ್ಜಿಗಳು ಕಡಲೆ ಖರೀದಿಗಾಗಿ  ಸಲ್ಲಿಕೆಯಾಗಿವೆ. ಮಾ.13 ಸೋಮವಾರದಿಂದ ಕಡಲೆ ಖರೀದಿ ಸಹ ಆರಂಭವಾಗಿದ್ದು, ರೈತರು ಅತಿ ಉತ್ಸಾಹದಿಂದ ತಮ್ಮ ತಮ್ಮ ಕಡಲೆ ಬೆಳೆಗಳನ್ನು ಮಾರಾಟ ಮಾಡಲು ಬಂದಿದ್ದು ಕುಂದಗೋಳ ಎಪಿಎಂಸಿ ಸುತ್ತ ರಾಶಿ ರಾಶಿ ಕಡಲೆ ಹೊತ್ತ ಟ್ರ್ಯಾಕ್ಟರ್'ಗಳೇ ಕಣ್ಣಿಗೆ ಕಾಣ್ತಾ ಇವೆ.

ಕಳೆದ ಬಾರಿ ಅತಿವೃಷ್ಟಿ ಪರಿಣಾಮ ರೈತಾಪಿ ಜನರು ಅತಿ ಹೆಚ್ಚಾಗಿ ಹಿಂಗಾರು ಕಡಲೆ ಬಿತ್ತನೆ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನಲ್ಲಿ ಈ ಬಾರಿ ಅತಿ ಹೆಚ್ಚಿನ ಕಡಲೆ ಬೆಳೆ ಬಂದಿದೆ.ಸದ್ಯ ಹೊರಗಡೆ ಸದ್ಯ ವರ್ತಕರು 4500 ರಿಂದ 4800 ರೂಪಾಯಿ ವರೆಗೆ ಕ್ವಿಂಟಾಲ್ ಕಡಲೆಗೆ ಬೇಡಿಕೆ ಇಟ್ಟರೇ ಸರ್ಕಾರದ ಕಡಲೆ ಖರೀದಿ ಕೇಂದ್ರದಲ್ಲಿ ರೈತರ ಕ್ವಿಂಟಾಲ್ ಕಡಲೆಗೆ 5335 ರೂಪಾಯಿ ಸಿಗ್ತಾ ಇರೋದು ರೈತರ ಸಂತೋಷಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ