ಉತ್ತರ ಕರ್ನಾಟಕದಲ್ಲೂ ಡೆಲ್ಟಾ ಭೀತಿ

ಭಾನುವಾರ, 27 ಜೂನ್ 2021 (15:57 IST)
ಕಾರವಾರ: ದೇಶದಲ್ಲಿ ಈಗ ಕೊರೋನಾ ರೂಪಾಂತರಿ ತಳಿ ಡೆಲ್ಟಾ ಪ್ಲಸ್ ಭೀತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಉತ್ತರ ಕರ್ನಾಟಕದಲ್ಲೂ ಭೀತಿ ಮನೆ ಮಾಡಿದೆ.


ಗಡಿ ಜಿಲ್ಲೆಗಳಲ್ಲಿ ಈಗ ಮಹಾರಾಷ್ಟ್ರದಿಂದ ಡೆಲ್ಟಾ ಪ್ಲಸ್ ಪ್ರಕರಣಗಳು ಹಬ್ಬುವ ಭೀತಿ ಶುರುವಾಗಿದೆ. ಕೊರೋನಾ ಎರಡನೇ ಅಲೆ ಮಹಾರಾಷ್ಟ್ರದಿಂದ ಈ ಭಾಗಗಳಲ್ಲಿ ಹೆಚ್ಚಿನ ಹಾನಿ ಉಂಟು ಮಾಡಿತ್ತು.

ಮಹಾರಾಷ್ಟ್ರದಲ್ಲಿ ಈಗಾಗಲೇ 20 ಕ್ಕೂ ಹೆಚ್ಚು ಡೆಲ್ಟಾ ಪ್ಲಸ್ ಪ್ರಕರಣಗಳು ಕಂಡುಬಂದಿದೆ. ಉತ್ತರ ಕರ್ನಾಟಕ ಜಿಲ್ಲೆಗೆ ಅತೀ ಹತ್ತಿರುವಿರುವ ಭಾಗಗಳಲ್ಲೂ ಪ್ರಕರಣ ಪತ್ತೆಯಾಗಿರುವುದು ಈ ಜಿಲ್ಲೆಗೆ ಆತಂಕ ತಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ