ಕೆಲ ದಿನದ ಹಿಂದೆಯೇ ಸರ್ಕಾರಕ್ಕೆ ಕಡ್ಡಾಯ ಕಾನೂನು ಜಾರಿಗೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿದೆ.ಜೊತೆಗೆ ಒತ್ತಡ ಹೇರುವ ನಿಟ್ಟಿನಲ್ಲಿ ರಾಜ್ಯದ್ಯಾಂತ ಅಭಿಯಾನ , ಪ್ರತಿಭಟನೆಗಳ ಎಚ್ಚರಿಕೆಯನ್ನ ಹಿಂದೂಪರ ಸಂಘಟನೆಗಳು ನೀಡಿದೆ.ಎಚ್ಚರಿಕೆ ಬೆನ್ನಲ್ಲೆ ಇಂದಿನಿಂದ ಸರ್ಕಾರದ ಮೇಲೆ ವಿಭಿನ್ನ ರೀತಿಯಲ್ಲಿ ಒತ್ತಡ ಹೇರಲು ತಯಾರಿ ಮಾಡಿಕೊಂಡಿದೆ.
ಒಂದು ವಾರಗಳ ಕಾಲ ರಾಜ್ಯವ್ಯಾಪಿ ಬಿಜೆಪಿ ನಾಯಕರಿಗೆ, ಮಂತ್ರಿಗಳಿಗೆ,ಶಾಸಕರಿಗೆ ಕಡ್ಡಾಯ ಕಾನೂನು ಜಾರಿಗೆ ಒತ್ತಾಯಿಸಿ ಮನವಿಗೆ ಪ್ಲ್ಯಾನ್ ಮಾಡಿದ್ದು,ಗೃಹ ಸಚಿವರಿಂದಲೇ ಮನವಿ ಅಭಿಯಾನ ಆರಂಭಿಸಲು ಪ್ಲ್ಯಾನ್ ಮಾಡಿದ್ದಾರೆ.ಹಾಗಾಗಿ ಇಂದು ಬೆಳಗ್ಗೆ ಗೃಹ ಸಚಿವರಿಗೆ ಹಿಂದೂ ಸಂಘಟನೆಗಳು ಮನವಿ ಸಲ್ಲಿಸಿದ್ದಾರೆ. 11 ರಿಂದ 18 ರವರೆಗೆ ಇಡೀ ರಾಜ್ಯದ್ಯಾಂತ ಎಲ್ಲಾ ಶಾಸಕರಿಗೂ ಸ್ಥಳೀಯ ಕಾರ್ಯಕರ್ತರಿಂದ ಮನವಿ ಸಲ್ಲಿಸಲು ಪ್ಲ್ಯಾನ್ ಮಾಡಿದ್ದು,ಈಗಾಗಲೇ ಈ ಬಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂದೂಪರ ಸಂಘಟನೆಗಳು ಸಭೆ ಮಾಡಿದೆ.ಈ ಮೂಲಕ ಲವ್ ಜಿಹಾದ್ ವಿರುದ್ದ ಸರ್ಕಾರದ ಮಟ್ಟದಲ್ಲೇ ಸಮರ ಸಾರಲು ತಯಾರಿ ಮಾಡಿದೆ.