ನಾಳೆಯಿಂದ ಫೆಬ್ರವರಿ 23ರವರೆಗೆ ಆಕಾಶವಾಣಿಯಲ್ಲಿ ನಿತ್ಯ ಪಠ್ಯ ಬೋಧನೆ
ಶಾಲಾ ಮಕ್ಕಳಿಗೆ ಆಕಾಶವಾಣಿಮೂಲಕ ಪಠ್ಯ ಬೋಧನೆಯ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದೆ. ಗುಣಾತ್ಮಕ ಶಿಕ್ಷಣದ ಗುರಿ ಸಾಧನೆಯೊಂದಿಗೆ ಡಿಜಿಟಲ್ ಉಪಕ್ರಮದ ಅಳವಡಿಕೆ ಹಾಗೂ ತರಗತಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಏಕತಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಆಕಾಶವಾಣಿಯ ಮೂಲಕ ಶಾಲೆಗಳಲ್ಲಿ ರೇಡಿಯೋ ಪಾಠವನ್ನು ಪ್ರಸಾರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪ್ರಕಟ ಮಾಡಿರುವ ವೇಳಾಪಟ್ಟಿಯಲ್ಲಿ ನಾಳೆಯಿಂದ ಫೆಬ್ರವರಿ 23ರವರೆಗೆ ಆಕಾಶವಾಣಿಯಲ್ಲಿ ನಿತ್ಯ ಪಠ್ಯ ಬೋಧನೆ ನಡೆಯಲಿದೆ. 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪಠ್ಯ ಬೋಧನೆ ನಡೆಯಲಿದ್ದು, ಬಾನ್ ದನಿ ಕಾರ್ಯಕ್ರಮದ ಮೂಲಕ ಪಠ್ಯ ಬೋಧನೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.