ಹಂಪಿ ಉತ್ಸವಕ್ಕಾಗಿ ಭಿಕ್ಷೆ ಬೇಡ್ತಿನಿ ಎಂದ ಶಾಸಕ

ಭಾನುವಾರ, 2 ಡಿಸೆಂಬರ್ 2018 (17:31 IST)
ರಾಜ್ಯದ ಮೈತ್ರಿ ಸರ್ಕಾರಕ್ಕೆ ಐತಿಹಾಸಿಕ ಹಂಪಿ ಉತ್ಸವ ನಡೆಸಲು ಹಣದ ಕೊರತೆ ಇದೆ ಎಂದು ಹೇಳಿದರೆ ನಾವು ನಮ್ಮ ಪಕ್ಷದಿಂದ ಭಿಕ್ಷೆ ಬೇಡಿ ಉತ್ಸವ ನಡೆಸಲು ಸರ್ಕಾರಕ್ಕೆ ಹಣ ನೀಡಲಿದ್ದೇವೆ. ಹೀಗಂತ ಶಾಸಕ ಸವಾಲು ಹಾಕಿದ್ದಾರೆ.

ಹಂಪಿ ಉತ್ಸವ ನಡೆಸದೇ ಇರಲು ಸರಕಾರ ತೀರ್ಮಾನ ಮಾಡಿರುವ ಹಿನ್ನೆಲೆಯಲ್ಲಿ ಬಳ್ಳಾಗಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಈ ರೀತಿಯಾಗಿ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿ ವರ್ಷದಂತೆ ವರ್ಷವೂ ಮೂರು ದಿನಗಳ ಕಾಲ ಉತ್ಸವ ನಡೆಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹೊರ ಜಿಲ್ಲೆಯವರಾಗಿರುವುದರಿಂದ ಅವರಿಗೆ ಆಸಕ್ತಿ ಇಲ್ಲ. ಇದೇ ಜಿಲ್ಲೆಯವರಾಗಿದ್ದರೆ ಆಸಕ್ತಿ ಇರುತ್ತಿತ್ತು ಎಂದು ಆರೋಪಿಸಿದರು. ಹಂಪಿ ಉತ್ಸವ ನಡೆಸುವಂತೆ ತಿಂಗಳ 10ರಿಂದ ಆರಂಭಗೊಳ್ಳುವ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೆ ಮಾಡುವುದಾಗಿ ಹೇಳಿದರು.

ಉಪಚುನಾವಣೆಯಲ್ಲಿ ಗೆದ್ದೀವಿ ಎಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದ್ದೂರಿ ಸಮಾರಂಭ ಮಾಡುವವರು ಹಂಪಿ ಉತ್ಸವಕ್ಕೆ ಬರಗಾಲ ಎನ್ನುವುದು ಸರಿಯಲ್ಲವೆಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ