ಹಂಪಿ ಉತ್ಸವ ರದ್ದು ವಿಚಾರ; ಸರ್ಕಾರದ ವಿರುದ್ಧ ಬಿಜೆಪಿ ಶಾಸಕರು ಆಕ್ರೋಶ

ಭಾನುವಾರ, 2 ಡಿಸೆಂಬರ್ 2018 (12:39 IST)
ಬೆಂಗಳೂರು : ಹಂಪಿ ಉತ್ಸವ ರದ್ದುಮಾಡಿದ್ದಕ್ಕೆ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಸೋಮಶೇಖರ ರೆಡ್ಡಿ ಕಿಡಿಕಾರಿದ್ದಾರೆ.


‘ಮೈಸೂರು ದಸರಾಗೆ ಇಲ್ಲದ ಬರ, ಹಂಪಿ ಉತ್ಸವಕ್ಕೆ ಏಕೆ ಅಡ್ಡಿ. ಕಾಂಗ್ರೆಸ್ ಕೃತಜ್ಞತಾ ಸಮಾವೇಶಕ್ಕೆ ಕೋಟಿ ಕೋಟಿ ಖರ್ಚು ಮಾಡ್ತಾರೆ. ಹಂಪಿ ಉತ್ಸವಕ್ಕೆ ಹಣ ಇಲ್ಲ ಅಂದ್ರೆ ಹೇಗೆ?’ ಎಂದು ಸೋಮಶೇಖರ ರೆಡ್ಡಿ ಪ್ರಶ್ನಿಸಿದ್ದಾರೆ.

 
ಅಲ್ಲದೇ ‘ಬಳ್ಳಾರಿಯ ಎಲ್ಲಾ ಶಾಸಕರು ಸೇರಿ ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ಹಂಪಿ ಉತ್ಸವಕ್ಕೆ ಸರ್ಕಾರದಿಂದ ಹಣ ಇಲ್ಲದಿದ್ರೆ ಬಳ್ಳಾರಿಯಲ್ಲಿ ಭಿಕ್ಷೆ ಬೇಡುತ್ತೇವೆ. ಸ್ವಾಮೀಜಿಗಳಂತೆ ನಾವು ಕೂಡ ಭಿಕ್ಷೆ ಬೇಡಿ ಸರ್ಕಾರಕ್ಕೆ ಹಣ ಕೊಡುತ್ತೇವೆ. ಪ್ರವಾಸಿಗರಿಂದ ಬರುವ ಆದಾಯದಿಂದಲ್ಲೇ ಹಂಪಿ ಉತ್ಸವ ಮಾಡಬಹುದು. ಆದರೆ ಹಂಪಿ ಉತ್ಸವ ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಿಸಬಾರದು’ ಎಂದು ಸೋಮಶೇಖರ ರೆಡ್ಡಿ ಒತ್ತಾಯಿಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ