ತಮಿಳುನಾಡಿನಲ್ಲಿ ಡಿಮ್ಯಾಂಡ್, ಬೆಂಗಳೂರಿನಲ್ಲಿ ಪಿಕ್..!

ಶುಕ್ರವಾರ, 18 ನವೆಂಬರ್ 2022 (15:01 IST)
ಹೈ ಎಂಡ್ ಬೈಕ್ ಗಳೇ ಟಾರ್ಗೆಟ್, ಆರ್ ಎಕ್ಸ್ ಬೈಕ್ ಗಳೇ ಪೇವರೇಟ್.ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸಿದ್ರೆ ಬೆಳಗಾಗುವಷ್ಟರಲ್ಲಿ ಮಾಯವಗಿರುತ್ತೆ.ಆರ್ ಎಕ್ಸ್ ಹಾಗೂ ಡಿಯೋ ಬೈಕ್ ಗೆ ತಮಿಳುನಾಡಿನಲ್ಲಿದ್ಯಂತೆ ವಿಪರೀತ ಡಿಮ್ಯಾಂಡ್ ಶುರುವಾಗಿದೆ.ಹೀಗಾಗಿ ಡಿಮ್ಯಾಂಡ್ ಗೆ ತಕ್ಕಂತೆ ಬೆಂಗಳೂರಿನಲ್ಲಿ ಪಿಚ್ ರೆಡಿ ಮಾಡೋ ಖದೀಮರು.ಸಿಟಿಯಲ್ಲಿ ಒಂದೇ ಬೈಕ್ ಕಳ್ಳತನ ಮಾಡಿ, ತಮಿಳುನಾಡಿಗೆ ಡ್ರೈವ್ ಮಾಡಿಕೊಂಡು ಹೋಗಿ ಅಲ್ಲಿ ಮಾರಾಟಮಾಡ್ತಾರೆ .ನಂತರ ಹಣ ಖಾಲಿಯಾದ ಬಳಿಕ ಮತ್ತೆ ಸಿಟಿಗೆ ಎಂಟ್ರಿ ಕೊಡ್ತಾರೆ.
 
ಪಬ್ ಬಾರ್ ಶೋಕಿ ,ತಮಿಳಿನಾಡಿನಲ್ಲಿ ಬಿಂದಾಸ್ ಲೈಫ್ ಸ್ಟೈಲ್ ಮಾಡುವುದಕ್ಕಾಗಿ ಸಿಲಿಕಾನ್ ಸಿಟಿಯಲ್ಲಿ ಆರ್ ಎಕ್ಸ್ ಬೈಕ್ ಗುರ್ತಿಸಿ ಎಗರಿಸುತ್ತಿದ್ದ ಖದೀಮರನ್ನ ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳ ಬಂಧಿಸಿದ್ದು,ರಾಜ್ ಕುಮಾರ್ ಹಾಗೂ ಮಹೇಂದ್ರ ಬಂಧಿತ ಆರೋಪಿಗಳು.ಬಂಧಿತರಿಂದ ಬರೊಬ್ಬರಿ 32 ಬೈಕ್ ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.
 
ಈ ಪೈಕಿ 16 ಬೈಕ್ ಆರ್ ಎಕ್ಸ್ ಆದ್ರೆ 15 ಡಿಯೋ ಬೈಕ್ ಬೆಂಗಳೂರಿನಲ್ಲಿ ಬೈಕ್ ಎಗರಿಸಿ ತಮಿಳುನಾಡಿನಲ್ಲಿ ಮಧ್ಯವರ್ತಿ ಮೂಲಕ  ಕಸ್ಟಮರ್ ಹಿಡಿದು ಮಾರಾಟ ಮಾಡ್ತಿದರು.ಸದ್ಯ ಆರೋಪಿಗಳನ್ನ ಬಂಧಿಸಿ  ಪುಟ್ಟೇನಹಳ್ಳಿ ಪೊಲೀಸರು ಜೈಲಿಗಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ