ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರು ರಸ್ತೆಗುಂಡಿಗಳು ಕಾಣಸಿಗುತ್ತವೆ. ಈ ರಸ್ತೆಗುಂಡಿಗಳಿಂದ ವಾಹನಸವಾರರು ರೋಸಿ ಹೋಗಿದ್ದಾರೆ.ಇನ್ನೂ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಮಾದೇಶ್ವರ ನಗರದಲ್ಲಂತೂ ರಸ್ತೆಯುದ್ದಕ್ಕೂ ಗುಂಡಿಗಳ ಸರಮಾಲೆಯೇ ಇದೆ.ಸುಂಕದಕಟ್ಟೆ ಬಳಿಯಿರುವ ಮಾದೇಶ್ವರ ನಗರ ಮುಖ್ಯ ರಸ್ತೆಯೇ ಸಂಪೂರ್ಣ ಗುಂಡಿಮಯವಾಗಿದೆ.ವಾಹನ ಓಡಿಸಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ.ಅದೆಷ್ಟೋ ಸವಾರರು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ.
ಇಷ್ಟೆಲ್ಲಾ ಆದರೂ ಬಿಬಿಎಂ ಯಾವುದೇ ಕ್ರಮ ಕೈಗೊಂಡಿಲ್ಲ .ಇನ್ನೂ ಅದೆಷ್ಟು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತೀರಾ? ಎಂದು ಸಾರ್ವಜನಿಕರು ಬಿಬಿಎಂಪಿ ಗೆ ಹಿಡಿಶಾಪ ಹಾಕುತ್ತಿದ್ದಾರೆ.