ಇರೋ ಬರೋ ಜ್ವರವೆಲ್ಲಾ ಬೆಂಗಳೂರಿನಲ್ಲಿ: ಇಂದು ಜಿಲ್ಲಾಧಿಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ

Krishnaveni K

ಸೋಮವಾರ, 8 ಜುಲೈ 2024 (11:03 IST)
ಬೆಂಗಳೂರು: ಮಳೆ ಬಂದ ಮೇಲೆ ಬೆಂಗಳೂರಿನಲ್ಲಿ ಈಗ ಜ್ವರಗಳದ್ದೇ ಹಾವಳಿ. ಬೇರೆ ಬೇರೆ ರೀತಿಯ ಜ್ವರಗಳು ಈಗ ಬೆಂಗಳೂರಿಗರನ್ನು ಹೈರಾಣಾಗಿಸಿದೆ. ಒಂದೇ ದಿನ 159 ಡೆಂಘೀ ಕೇಸ್ ಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಈ ಹಿನ್ನಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಡೆಂಘೀ ಪ್ರಕರಣಗಳ ನಿರ್ವಹಣೆ ವಿಚಾರದಲ್ಲಿ ಈಗಾಗಲೇ ಆಡಳಿತ ಸರ್ಕಾರವನ್ನು ವಿಪಕ್ಷ ಬಿಜೆಪಿ ತರಾಟೆಗೆ ತೆಗೆದುಕೊಳ್ಳುತ್ತಿದೆ. ಡೆಂಘೀಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಇಂದು ಸಿಎಂ ಸಭೆ ಮಹತ್ವ ಪಡೆದುಕೊಂಡಿದೆ.

ಕೇವಲ ಡೆಂಘೀ ಮಾತ್ರವಲ್ಲ, ಇಲಿ ಜ್ವರ, ಝೀಕಾ ವೈರಸ್ ಪ್ರಕರಣಗಳೂ ಪತ್ತೆಯಾಗಿದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು, ಕೇರಳದಲ್ಲಿ ಹಂದಿ ಜ್ವರ, ಮೆದುಳು ತಿನ್ನುವ ಅಮೀಬಾ ಸೋಂಕು ಪತ್ತೆಯಾಗಿದೆ. ಅದು ಕರ್ನಾಟಕಕ್ಕೂ ಹರಡದಂತೆ ಎಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಸೋಂಕು ರೋಗಗಳು ಹರಡದಂತೆ ತಡೆಯಲು ಪ್ರತೀ ಗ್ರಾಮಗಳಿಗೆ ಸಲಹೆ ಸೂಚನೆ ನೀಡಲಾಗಿದೆ. ನೀರಿನ ತೊಟ್ಟಿ, ವಾಟರ್ ಟ್ಯಾಂಕ್, ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ, ಕಟ್ಟಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ