ನಗರದ ಮಕ್ಕಳಿಗೆ ಹೆಮ್ಮಾರಿಯಂತೆ ಕಾಡುತ್ತಿರುವ ಡೆಂಗ್ಯೂ ಜ್ವರ

ಗುರುವಾರ, 30 ಜೂನ್ 2022 (18:09 IST)
ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಈಗಾಗಲ್ಲೇ ಮಕ್ಕಳ ವಾರ್ಡ್ ಭರ್ತಿಯಾಗಿದ್ದು, ಪೋಷಕರಂತೂ ವಾರ್ಡ್ ಭರ್ತಿಯಾಗಿರುವಕ್ಕೆ ಸುಸ್ತಾಗಿದ್ದಾರೆ. ನಿತ್ಯ ದಿನದಿಂದ ದಿನಕ್ಕೆ ಕೇಸಸ್ ಹೆಚ್ಚಾಗ್ತಿದ್ದು, ಆಡ್ಮೀಟ್ ಆಗುವ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಡಿಸ್ಚಾರ್ಜ್ ಆಗ್ತಿದಂತೆ ಆಡ್ಮೀಟ್ ಆಗುವ ಪ್ರಕರಣ ಹೆಚ್ಚಾಗ್ತಿದೆ. ಹೀಗಾಗಿ ಪೋಷಕರು ಆತಂಕಗೊಂಡಿದ್ದಾರೆ.  ಡೆಂಗ್ಯೂ ಜ್ವರ  ಹೆಚ್ಚಾಗಿರುವುದಕ್ಕೆ ಪೋಷಷಕರು ಆತಂಕಕ್ಕೆ ಹೀಡಾಗಿದ್ದಾರೆ. ಇನ್ನು ಪೋಷಕರು ಇನ್ಮುಂದೆ ಎಚ್ಚರವಹಿಸಬೇಕು . ತಮ್ಮ ಮಕ್ಕಳನ್ನ ಹುಷರಾಗಿ ನೋಡಿಕೊಳ್ಳಬೇಕು . ಇಲ್ಲವಾದ್ರೆ ಮಕ್ಕಳ ಸ್ಥಿತಿ ಶೋಚನೀಯವಾಗಲಿದೆ.ಪುಟ್ಟ ಮಕ್ಕಳನ್ನ ಎಷ್ಟು ಜೋಪನವಾಗಿ ನೋಡಿಕೊಂಡ್ರು ಕಡಿಮೆನ್ನೇ . ಅವರಿಗೆ ಸ್ವಲ್ಪ ಜ್ವರ ಬಂದ್ರೆ ತಡೆದುಕೊಳ್ಳಲು ಶಕ್ತಿ ಇರಲ್ಲ . ಅಂತಾದ್ರಲ್ಲಿ ಈಗ ಡೆಂಘ್ವಿ ಪ್ರಕರಣ ಹೆಚ್ಚಾಗ್ತಿದೆ. ಆದಷ್ಟು ಮನೆ ಅಕ್ಕಪಕ್ಕ ಶುಚಿತ್ವ ಕಾಪಾಡಿಕೊಳ್ಳಿ. ಮಕ್ಕಳನ್ನ ಸುರಕ್ಷಿತವಾಗಿ ನೋಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ