ಜುಲೈ 5 ರ ಸಂಜೆ 7 ಗಂಟೆಗೆ ಗಣಪತಿ ಅವರು ಆತ್ಮಹತ್ಯೆಗೆ ಶರಣಾಗಿರುವ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಆದರೆ, ಪೊಲೀಸರು ಗಣಪತಿ ಪತ್ನಿ ಪಾವನಾ ಅವರಿಗೆ ಮಾಹಿತಿ ನೀಡಿರಲಿಲ್ಲ. ಜೊತೆಗೆ ರಾತ್ರಿ 8 ಗಂಟೆಯವರೆಗೂ ಕೇಸ್ ದಾಖಲಿಸಿಕೊಳ್ಳದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಗಣಪತಿ ಆತ್ಮಹತ್ಯೆಗೆ ಶರಣಾಗುವ ಮುಂಚೆ ಅವರ ಸಹೋದರ ಡಿವೈಎಸ್‌ಪಿ ತಮ್ಮಯ್ಯ ಅವರಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸಂದೇಶ ರವಾನಿಸಿದ್ದರು. ಆದರೆ, ತಮ್ಮಯ್ಯ ತಡವಾಗಿ ಸಂದೇಶವನ್ನು ನೋಡಿರುತ್ತಾರೆ. ಅಷ್ಟೋತ್ತಿಗೆ ಮಾಧ್ಯಮದಲ್ಲಿ ಗಣಪತಿ ನೀಡಿರುವ ಸಂದರ್ಶನ ಪ್ರಸಾರವಾಗುತ್ತಿತ್ತು. ನಂತರ ತಮ್ಮಯ್ಯನವರು ಟವರ್ ಲೋಕೆಶನ್ ಪತ್ತೆ ಮಾಡಲು ಪೊಲೀಸರಿಗೆ ಸೂಚನೆ ನೀಡುತ್ತಾರೆ. ಆವಾಗ, ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್‌ನಲ್ಲಿ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಸಿಐಡಿ ಅಧಿಕಾರಿಗಳು ವರದಿ ನೀಡಿದ್ದಾರೆ.