ನಗರದಾದ್ಯಂತ 2,000 ಹೋಮ್‍ಗಾರ್ಡ್ಸ್ ನಿಯೋಜನೆ

ಭಾನುವಾರ, 11 ಜೂನ್ 2023 (09:33 IST)
ಬೆಂಗಳೂರಿನದ್ಯಂತ ಸುಮಾರು ಎರಡು ಸಾವಿರ ಹೋಮ್ ಗಾರ್ಡ್ಗಳನ್ನು ನಿಯೋಜನೆ ಮಾಡಿದ್ದು, ಪ್ರತಿ ಬಸ್ನಲ್ಲಿ ಇಬ್ಬರು ಹೋಮ್ ಗಾಡ್ರ್ಸ್, ಬಸ್ ನಿಲ್ದಾಣಗಳಲ್ಲಿ ಹೆಚ್ಚುವರಿ ಹೋಮ್ ಗಾರ್ಡ್ಗಳ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 
 
ಪ್ರಯಾಣಿಕರು ಹಾಗೂ ಸಿಬ್ಬಂದಿ ನಡುವೆ ಯಾವುದೇ ಗಲಾಟೆಗಳು, ಗೊಂದಲಗಳು ನಡೆಯದಂತೆ ಎಚ್ಚರಿಕೆ ವಹಿಸಲು ಬೆಂಗಳೂರು ಪೊಲೀಸ್ ಕಮಿಷನರ್ ಸಂಬಂಧಪಟ್ಟ ಡಿವಿಜನ್ಗಳ ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್ ಗಳಿಗೆ ಸೂಚನೆ ನೀಡಿದ್ದಾರೆ.

ಪ್ರತಿ ಡಿವಿಜನ್ಗೆ 350 ಹೋಮ್ ಗಾರ್ಡ್ಗಳಂತೆ 8 ಡಿವಿಷನ್ಗಳಲ್ಲಿ 2 ಸಾವಿರ ಹೋಮ್ಗಳನ್ನು ಭದ್ರೆತೆ ನಿಯೋಜನೆ ಮಾಡಲಾಗಿದೆ. ಪೊಲೀಸರು ಕೂಡ ಸಾಥ್ ನೀಡಲಿದ್ದು, ಬಸ್ ನಿಲ್ದಾಣಗಳು, ಮತ್ತು ರಸ್ತೆಗಳಲ್ಲಿ ಹೆಚ್ಚಿನ ಗಸ್ತು ತಿರುಗಲಿದ್ದಾರೆ.

ಒಟ್ಟಿನಲ್ಲಿ ಇಂದು 1 ಗಂಟೆ ನಂತರ ಮಹಿಳೆಯರು ಬಿಎಂಟಿಸಿ, ಕೆಎಸ್ಆರ್ ಟಿಸಿ ಬಸ್ಗಳಲ್ಲಿ ಉಚಿತವಾಗಿ ಓಡಾಡಬಹುದಾಗಿದೆ. ಯಾವುದೇ ಗೊಂದಲ, ಗಲಾಟೆಗಳು ಆಗದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ