ಗಳಗಳ ಕಣ್ಣೀರಿಟ್ಟ ಉಪಮುಖ್ಯಮಂತ್ರಿ
ರಾಜ್ಯದ ಉಪಮುಖ್ಯಮಂತ್ರಿಯೊಬ್ಬರು ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ನನಗೂ 70 ವರ್ಷಗಳಾಗಿವೆ. ಕೊರೊನಾ ವೈರಸ್ ನಿಂದಾಗಿ ತಾವು ಹಾಗೂ ತಮ್ಮ ಕುಟುಂಬದವರು ತೊಂದರೆ ಅನುಭವಿಸುವಂತಾಗಿದೆ ಎಂದಿದ್ದಾರೆ.
ಕೊರೊನಾ ಸಮಯದಲ್ಲಿ ಎಲ್ಲೆಡೆ ಪ್ರಯಾಣ ಮಾಡಿ ಹೇಗೆ ಕೆಲಸ ಮಾಡಿದ್ದೇನೆ ಎಂಬುದು ಜನರಿಗೆಲ್ಲ ಗೊತ್ತಿದೆ. ಈಗ ಕೊರೊನಾದಿಂದಾಗಿ ರಾಜ್ಯದಲ್ಲಿ ಪ್ರವಾಸ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಬೇಸರ ಹಾಗೂ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಬೈ ಎಲೆಕ್ಷನ್ ನಲ್ಲಿ ಬ್ಯುಸಿಯಾಗಿರುವ ಸಚಿವರಿಗೆ ನೆರೆ ಸಂತ್ರಸ್ತರನ್ನು ಭೇಟಿ ಮಾಡುತ್ತಿಲ್ಲ ಎಂದು ವಿಪಕ್ಷಗಳು ದೂರಿದ್ದಕ್ಕೆ ಡಿಸಿಎಂ ಅಸಮಧಾನ ವ್ಯಕ್ತಪಡಿಸಿದ್ದಾರೆ.