ಗಣೇಶನ ಮೂರ್ತಿಯನ್ನು ಮನೆಯ ಯಾವ ದಿಕ್ಕಿನಲ್ಲಿ ಕೂರಿಸಬೇಕು ಇಲ್ಲಿದೆ ವಿವರ

Krishnaveni K

ಗುರುವಾರ, 21 ಆಗಸ್ಟ್ 2025 (10:24 IST)
ಇನ್ನೇನು ಗಣೇಶ ಹಬ್ಬ ಬರುತ್ತಿದ್ದು ಮನೆಗೆ ಗಣಪನ ಮೂರ್ತಿಯನ್ನು ತಂದು ಪೂಜೆ ಮಾಡಲು ಎಲ್ಲರೂ ಸಿದ್ಧರಾಗಿರುತ್ತೀರಿ. ಈ ಸಂದರ್ಭದಲ್ಲಿ ಗಣೇಶನ ಮೂರ್ತಿಯನ್ನು ಎಲ್ಲಿ ಇಡುವುದು ಸೂಕ್ತ ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ.

ಗಣೇಶನ ಮೂರ್ತಿಯನ್ನು ಕೂರಿಸುವುದರಿಂದ ಹಿಡಿದು ಪೂಜೆ ಮಾಡಿ ವಿಸರ್ಜನೆ ಮಾಡುವವರೆಗೆ ಎಲ್ಲದಕ್ಕೂ ಒಂದು ನಿಯಮವಿದೆ. ಮನೆಯಲ್ಲಿ ಎಲ್ಲೆಂದರಲ್ಲಿ ಗಣೇಶನ ಮೂರ್ತಿಯನ್ನು ಇಡುವುದು ತಪ್ಪಾಗುತ್ತದೆ.

ವಾಸ್ತು ಪ್ರಕಾರ ಗಣೇಶನ ಮೂರ್ತಿಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು.  ಮನೆಯ ದಕ್ಷಿಣ ದಿಕ್ಕಿನಲ್ಲಿ ಗಣೇಶನ ಮೂರ್ತಿಯನ್ನು ಇಡುವುದು ಸೂಕ್ತವಲ್ಲ. ಅದೇ ರೀತಿ ಬಚ್ಚಲು ಮನೆಯ ಪಕ್ಕ, ಚಪ್ಪಲಿ ಬಿಡುವ ಸ್ಥಳಗಳಲ್ಲಿ ಗಲೀಜಾದ ಜಾಗಗಳಲ್ಲಿ ಗಣೇಶನ ಮೂರ್ತಿಯನ್ನು ಇಡಬಾರದು. ಒಂದು ಮನೆಯಲ್ಲಿ ಒಂದೇ ಗಣೇಶನ ಮೂರ್ತಿಯನ್ನು ಇಡಬೇಕು. ಇದರಿಂದ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಹೀಗಾಗಿ ಗಣೇಶನ ಕೂರಿಸುವ ಮೊದಲು ಈ ವಿಚಾರಗಳು ನಿಮ್ಮ ಗಮನದಲ್ಲಿರಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ