ಬೆಂಗಳೂರು : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಡುವ ಬಗ್ಗೆ ದೇವೇಗೌಡ, ಕುಮಾರಸ್ವಾಮಿ ನಿರ್ಧಾರವೇ ಅಂತಿಮ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಇಲ್ಲ ಎಂಬ ವಿಷಯಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭೆ ಚುನಾವಣೆ ವಿಚಾರದಲ್ಲಿ ದೇವೇಗೌಡರು, ಕುಮಾರಸ್ವಾಮಿ ನಿರ್ಧಾರವೇ ಅಂತಿಮ. ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರವೂ ಅವರೇ ತೀರ್ಮಾನ ಮಾಡ್ತಾರೆ ಎಂದರು.
ಪಕ್ಷ ಏನ್ ತೀರ್ಮಾನ ಮಾಡುತ್ತೋ ಅದೇ ಅಂತಿಮ. ಅದಕ್ಕೆ ನಾವು ಬದ್ದ. ವಿಧಾನಸಭೆ ಚುನಾವಣೆಯಲ್ಲೂ ಭವಾನಿ ವಿಚಾರದಲ್ಲಿ ಇದೇ ಹೇಳಿದ್ದೆವು. ಜನಾಭಿಪ್ರಾಯಕ್ಕೆ ಭವಾನಿ ನಿಲ್ಲಬೇಕು ಅಂತ ಇತ್ತು. ಆದರೆ ಪಕ್ಷದ ತೀರ್ಮಾನದಂತೆ ನಾವು ಒಪ್ಪಿಕೊಂಡ್ವಿ ಅಂತ ವಿಧಾನಸಭೆ ಚುನಾವಣೆ ಬಗ್ಗೆ ಮೆಲುಕು ಹಾಕಿದರು.
ಎಲ್ಲರಿಗೂ ದೇವೇಗೌಡರ ಕುಟುಂಬ ಮಾತ್ರ ಕಾಣಿಸೋದು. ಹೇಗಿದ್ರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ಕುಟುಂಬದವರು ಯಾರು ನಿಲ್ಲೋದು ಬೇಡ ಅಂತ ಒಂದು ಬಿಲ್ ತನ್ನಿ. ಕುಟುಂಬದವರು ಸ್ಪರ್ಧೆ ಮಾಡಬಾರದು ಅಂತ ಬಿಲ್ ತಂದರೆ ನಾವು ಬೆಂಬಲ ಕೊಡ್ತೀವಿ. ಇಲ್ಲ ಅಂದರೆ ಕೇವಲ ರಾಷ್ಟ್ರೀಯ ಪಕ್ಷದವರ ಕುಟುಂಬವರು ಮಾತ್ರ ಸ್ಪರ್ಧೆ ಮಾಡಬಹುದು.