ಬೆಳಗಾವಿ: ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ಗ್ಯಾಂಗ್ ಬಗ್ಗೆ ಎಸ್‌ಐಟಿ ಕೋರ್ಟ್‌ಗೆ ಪ್ರಾಥಮಿಕ ತನಿಖಾ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಆರು ಜನ ಷಡ್ಯಂತ್ರ ರೂಪಿಸಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಹಿಂದೂ ಭಾವನೆಗೆ ಧಕ್ಕೆಯಾಗಿದ್ದು, ಧಾರ್ಮಿಕ ಭಾವನೆಗೆ ಚೆಲ್ಲಾಟವಾಡಿದ್ದಾರೆ. ಇವರು ಪಾತ್ರದಾರಿಗಳು ಆದರೆ ಸೂತ್ರಧಾರಿಗಳು ಸಿಎಂ ಸುತ್ತ ಇರುವರೆ ಇದ್ದಾರೆ ಎಂದು ಟಾಂಗ್ ನೀಡಿದರು.
ಧರ್ಮಸ್ಥಳ ಪ್ರಕರಣದಲ್ಲಿ ಈ ಸರ್ಕಾರ ಜನರ ಭಾವನೆ ಜೊತೆ ಚೆಲ್ಲಾಟವಾಡಿದೆ. ಹಾದಿ ಬೀದಿಯಲ್ಲಿ ಹೋಗುವರ ಮಾತುಗಳನ್ನ ಕೇಳಿ ಎಸ್ಐಟಿ ರಚನೆ ಮಾಡಿ, ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಬುರುಡೆ ಗಾಂಗ್ ಶಾಮೀಲು ಎಂಬ ವರದಿ ಬಂದಿದೆ.
ಸೂತ್ರಧಾರಿಗಳು ಬೆರೆಯೇ ಇದ್ದಾರೆ. ಸೂತ್ರಧಾರಿಗಳು ಕೂಡ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಸುತ್ತಲೂ ಇದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದರು.