ಧರ್ಮಸ್ಥಳ ಬುರುಡೆ ರಹಸ್ಯದ ಮಾಸ್ಕ್‌ಮ್ಯಾನ್‌ ಬಗ್ಗೆ ಮೊದಲ ಪತ್ನಿ ಶಾಕಿಂಗ್ ಹೇಳಿಕೆ

Sampriya

ಗುರುವಾರ, 21 ಆಗಸ್ಟ್ 2025 (16:38 IST)
Photo Credit X
ಬೆಂಗಳೂರು: ಧರ್ಮಸ್ಥಳದ ಸುತ್ತಾ ಮುತ್ತಾ ಹಲವು ಶವಗಳನ್ನು ಹೂತಿಟ್ಟಿದ್ದೇನೆಂದು ಗಂಭೀರ ಆರೋಪ ಮಾಡಿರುವ ಮಾಸ್ಕ್‌ಮ್ಯಾನ್‌ ಬಗ್ಗೆ ಆತನ ಮೊದಲ ಪತ್ನಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 

ಆತ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ನಾನೂ ಜತೆಗಿದ್ದೆ. ಆದರೆ ಯಾವತ್ತೂ ಶವವನ್ನು ಹೂತಿಟ್ಟಿರುವ ಬಗ್ಗೆ ಬಾಯ್ಬಿಟ್ಟಿಲ್ಲ. ಇದೆಲ್ಲ ಕಟ್ಟು ಕತೆ, ಯಾರೋ ಆತನಿಗೆ ದುಡ್ಡು ಕೊಟ್ಟಿರಬೇಕು. ಅದಕ್ಕೆ ಆತ ಸುಳ್ಳು ಹೇಳುತ್ತಿದ್ದಾನೆ ಎಂದು ಮೊದಲ ಪತ್ನಿ ಪ್ರತಿಕ್ರಿಯಿಸಿದ್ದಾರೆ. 

ನಾನು ಜತೆಗಿದ್ದಾಗ ನನಗೆ ಹೊಡೆದು, ಕಿರುಕುಳ ನೀಡುತ್ತಿದ್ದ ಇದೀಗ ಯಾರೋ ಜತೆಗಿದ್ದಾನೆ ಎಂದು ದೂರಿದರು. 

ದಿಢೀರನೇ ಧರ್ಮಸ್ಥಳಕ್ಕೆ ಪೊಲೀಸ್ ಠಾಣೆಗೆ ವಕೀಲರ ಮುಖಾಂತರ ಬಂದು ಮಾಸಕ್‌ಮ್ಯಾನ್ ನಾನು ಕೆಲ ವರ್ಷಗಳ ಹಿಮದೆ ಿಲ್ಲಿನ ಸುತ್ತಾಮುತ್ತಾ ಹತ್ತಾರು ಶವಗಳನ್ನು ಹೂತಿಟ್ಟಿದ್ದೇನೆ. ಅದರಲ್ಲಿ ಕೆಲ ಶಾಲಾ ಹುಡುಗಿಯರ ಮೃತದೇಹವಿದ್ದು, ಅತ್ಯಾಚಾರ ಎಸಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

ಪಾಪ ಪ್ರಜ್ಞೆಯಿಂದ ಹೊರಬರಲು ಈ ದೂರನ್ನು ನೀಡುತ್ತಿದ್ದೇನೆ ಎಂದು ಠಾಣೆಯಲ್ಲಿ ದೂರು ನೀಡಿದ್ದ. ಗಂಭೀರತೆಯನ್ನು ಅರಿತು ರಾಜ್ಯ ಸರ್ಕಾರ ಈ ತನಿಖೆಯನ್ನು ಎಸ್‌ಐಟಿಗೆ ವಹಿಸಿದೆ. 17ಪಾಯಿಂಟ್‌ಗಳಲ್ಲಿ ಒಂದರಲ್ಲಿ ಬಿಟ್ಟರೆ 11ಎ ಭಾಗದಲ್ಲಿ ಮೂಳೆ ಪತ್ತೆಯಾಗಿತ್ತು.

 ಉತ್ಖನನ ಕಾರ್ಯಚರಣೆ ಸದ್ಯ ಸ್ಥಗಿತಗೊಂಡಿದ್ದು, ಎಸ್ಐಟಿ ತಂಡ ಎಫ್‌ಎಸ್‌ಎಲ್‌ ವರದಿಗೆ ಕಾಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ