ಧರ್ಮಸ್ಥಳದ ಬಗ್ಗೆ ಒಂದಾದ ಮೇಲೊಂದು ವಿಡಿಯೋ ಮಾಡಿದ್ದ ಸಮೀರ್ ಗೆ ಬಲೆ ಬೀಸಿದ ಪೊಲೀಸರು

Krishnaveni K

ಶನಿವಾರ, 23 ಆಗಸ್ಟ್ 2025 (11:39 IST)
ಮಂಗಳೂರು: ಧರ್ಮಸ್ಥಳದ ಬಗ್ಗೆ ಒಂದಾದ ಮೇಲೊಂದು ವಿಡಿಯೋ ಮಾಡಿ ಬುರುಡೆ ಬಿಟ್ಟಿದ್ದ ಮತ್ತೊಬ್ಬ ಎಂದರೆ ಯೂ ಟ್ಯೂಬರ್ ಸಮೀರ್ ಎಂಡಿ. ಇದೀಗ ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈಗಾಗಲೇ ಸುಜಾತ ಭಟ್ ಹೇಳಿದ್ದ ಮಗಳ ಕೊಲೆ, ರೇಪ್ ಪ್ರಕರಣ ಕಟ್ಟು ಕತೆ ಎಂದು ಬಯಲಾಗಿದೆ. ಮಾಸ್ಕ್ ಮ್ಯಾನ್ ಕೂಡಾ ತನ್ನ ಬಳಿ ಹೀಗೆಲ್ಲಾ ಒಂದು ಗುಂಪು ಹೇಳಿಸಿದೆ ಎಂದು ಸತ್ಯ ಬಾಯ್ಬಿಟ್ಟಿದ್ದ. ಇದೀಗ ಆತನನ್ನೂ ಪೊಲೀಸರು ಬಂಧಿಸಿದ್ದಾರೆ.

ಇದರ ನಡುವೆ ಈಗ ಸಮೀರ್ ಬಂಧನಕ್ಕೂ ಎಸ್ಐಟಿ ಬಲೆ ಬೀಸಿದೆ. ಬಂಧನ ಭೀತಿ ಎದುರಾಗುತ್ತಿದ್ದಂತೇ ಸಮೀರ್ ನಾಪತ್ತೆಯಾಗಿದ್ದಾನೆ. ಮಂಗಳೂರು ನ್ಯಾಯಾಲಯದಿಂದ ಬಂಧನ ತಡೆಗೆ ಜಾಮೀನು ಪಡೆದಿದ್ದ. ಇದೇ ಭಂಡ ಧೈರ್ಯದಿಂದ ಲೈವ್ ಬಂದಿದ್ದ.

ಆದರೆ ಈಗ ವಿಚಾರಣೆಗೆ ಹಾಜರಾಗಲು ಆತನ ಬಳ್ಳಾರಿ ನಿವಾಸಕ್ಕೆ ಪೊಲೀಸರು ನೋಟಿಸ್ ಅಂಟಿಸಿದ್ದಾರೆ. ಇದಾದ ಬಳಿಕ ಆತ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಒಂದು ವೇಳೆ ಆತ ವಿಚಾರಣೆಗೆ ಹಾಜರಾಗದೇ ಇದ್ದರೆ ಕೋರ್ಟ್ ನಿಂದ ವಾರೆಂಟ್ ಪಡೆದು ಬಂಧಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ