Dharmasthala case: ಮಾಸ್ಕ್ ಮ್ಯಾನ್ ಅರೆಸ್ಟ್

Krishnaveni K

ಶನಿವಾರ, 23 ಆಗಸ್ಟ್ 2025 (10:16 IST)
Photo Credit: X
ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಕತೆ ಕಟ್ಟಿ ಸಿಕ್ಕ ಸಿಕ್ಕಲ್ಲಿ ಮಣ್ಣು ಅಗೆಸಿದ್ದ ಮಾಸ್ಕ್ ಮ್ಯಾನ್ ನನ್ನೇ ಈಗ ಎಸ್ಐಟಿ ಬಂಧಿಸಿದೆ.

ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ಧರ್ಮಸ್ಥಳ ಕೇಸ್ ಗೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಒಂದೆಡೆ ಸುಜಾತ ಭಟ್ ತನ್ನ ಮಗಳ ಕತೆ ಹೇಳಿದ್ದು ಸುಳ್ಳು ಎಂದು ಬಯಲಾಗಿದ್ದರೆ ಇನ್ನೊಂದೆಡೆ ಯೂಟ್ಯೂಬರ್ ಸಮೀರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದರ ನಡುವೆ ಈಗ ನಿನ್ನೆಯಿಂದ ಮುಸುಕುಧಾರಿಯ ವಿಚಾರಣೆ ನಡೆಸುತ್ತಿದ್ದ ಎಸ್ಐಟಿ ಆತನ ಬಣ್ಣ ಬಯಲಾಗುತ್ತಿದ್ದಂತೇ ಅರೆಸ್ಟ್ ಮಾಡಿದೆ. ನಿನ್ನೆಯಿಂದ ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ಮುಸುಕುಧಾರಿಯ ವಿಚಾರಣೆ ನಡೆಸಲಾಗುತ್ತಿತ್ತು. ಆತ ತೋರಿಸಿದ ಪಾಯಿಂಟ್ ಗಳಲ್ಲಿ ಏನೂ ಸುಳಿವು ಸಿಗದೇ ಇದ್ದಾಗ ಪೊಲೀಸರು ಆತನನ್ನೇ ರಿವರ್ಸ್ ವಿಚಾರಣೆ ಶುರು ಮಾಡಿದ್ದರು.

ಈ ವೇಳೆ ಆತ ಕೆಲವು ಸತ್ಯಾಂಶ ಬಯಲು ಮಾಡಿದ್ದ. ತಮಿಳುನಾಡಿನಲ್ಲಿದ್ದ ನನ್ನನ್ನು ಕೆಲವು ಗುಂಪು ಸಂಪರ್ಕಿಸಿ ಅಕ್ರಮವಾಗಿ ಶವ ಹೂತಿದ್ದೆ ಎಂದು ಹೇಳಿಕೆ ನೀಡುವಂತೆ ಒತ್ತಾಯಿಸಿತ್ತು ಎಂದಿದ್ದ. ಇದರ ಬಳಿಕ ಕೇಸ್ ಗೆ ಟ್ವಿಸ್ಟ್ ಸಿಕ್ಕಿತ್ತು.

ಇದೀಗ ಮುಸುಕುಧಾರಿ ಧರ್ಮಸ್ಥಳದ ಬಗ್ಗೆ ಹೇಳಿದ್ದೆಲ್ಲವೂ ಸುಳ್ಳು ಎಂದು ಬಯಲಾಗಿದ್ದು ಆತನನ್ನು ಅರೆಸ್ಟ್ ಮಾಡಲಾಗಿದೆ. ಇಂದು ಕೋರ್ಟ್ ಗೆ ಹಾಜರುಪಡಿಸಲಿರುವ ಎಸ್ಐಟಿ ಅಧಿಕಾರಿಗಳು ಬಳಿಕ ವಶಕ್ಕೆ ಪಡೆಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ