ಧರ್ಮಸ್ಥಳ ಕೇಸ್ ರಹಸ್ಯ ಬಯಲಾಗುತ್ತಿದ್ದಂತೇ ಮಹತ್ವದ ಹೇಳಿಕೆ ಕೊಟ್ಟ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

Sampriya

ಮಂಗಳವಾರ, 19 ಆಗಸ್ಟ್ 2025 (17:57 IST)
Photo Credit X
ಬೆಳ್ತಂಗಡಿ: ಧರ್ಮಸ್ಥಳದ ವಿಚಾರವಾಗಿ ಕಳೆದ ಕೆಲ ದಿನಗಳಿಂದ ಉದ್ಭವವಾಗಿರುವ ಆರೋಪಗಳ ಸಂಬಂಧ ಕೊನೆಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿವೀರೇಂದ್ರ ಹೆಗ್ಗಡೆಯವರು ಮೌನ ಮುರಿದ್ದಾರೆ. 

ಟಿವಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು,  ಧರ್ಮಸ್ಥಳದಾದ್ಯಂತ ನಡೆದಿದೆ ಎನ್ನಲಾದ ಹತ್ತಾರು ಶವ ಹೂತಿಟ್ಟ ಪ್ರಕರಣ ಹಾಗೂ ಅತ್ಯಾಚಾರ ಆರೋಪ ಸಂಬಂಧ ಎಸ್‌ಐಟಿ ತನಿಖೆಯನ್ನು ಮುಕ್ತವಾಗಿ ಸ್ವಾಗತಿಸಿದ್ದೇವೆ. ಈ ಎಲ್ಲ ಆರೋಪಗಳು ಆಧಾರರಹಿತ ಹಾಗೂ ಸುಳ್ಳು ಎಂದು ಹೇಳಿದ ಅವರು ಈ ತನಿಖೆಯಿಂದ ಸತ್ಯಾಂಶ ಹೊರಬೀಳಬೇಕೆಂದರು. 

ಈ ವಿಷಯಗಳು ಆಧಾರರಹಿತ ಮತ್ತು ಸುಳ್ಳು, ಮತ್ತು ಈ ಆರೋಪಗಳಿಂದ ನನಗೆ ನಿಜವಾಗಿಯೂ ನೋವಾಗಿದೆ. ಸಾಮಾಜಿಕ
ಮಾಧ್ಯಮದಲ್ಲಿ ವಿಷಯಗಳನ್ನು ಬಿಂಬಿಸುವ ವಿಧಾನವು ನೈತಿಕವಾಗಿ ತಪ್ಪು ಎಂದು ಹೆಗ್ಗಡೆ ನೋವು ತೋಡಿಕೊಂಡರು.

ವಿಧಾನಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಅವರು ಎಸ್‌ಐಟಿ ಬಗೆಗಿನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ  ಅವರು ಅದೇ ದಿನ ಎಸ್‌ಐಟಿಯನ್ನು ಸ್ವಾಗತಿಸಿದ್ದೇವೆ.ರಾಜ್ಯ ರಚನೆಯಾಗಿರುವುದು ಒಳ್ಳೆಯದು, ಇನ್ನೊಮ್ಮೆ ಸತ್ಯ ಹೊರಬರಬೇಕು, ಆರೋಪ ಮಾಡಿ ಆ ರೀತಿ ಉಳಿಯುವುದು ಒಳ್ಳೆಯದಲ್ಲ.

ತನಿಖೆಗಳು ಶೀಘ್ರವಾಗಿ ಮುಕ್ತಾಯಗೊಳ್ಳಬೇಕು ಮತ್ತು ಸಮಸ್ಯೆಯನ್ನು ಪರಿಹರಿಸಬೇಕೆಂದು ನಾವು ಬಯಸುತ್ತೇವೆ. ಎಸ್‌ಐಟಿ ಸಂಪೂರ್ಣವಾಗಿ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೆಗ್ಗಡೆ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ