ಮುಂಬೈ: ಏಷ್ಯಾ ಕಪ್ ಗೆ ಟೀಂ ಇಂಡಿಯಾ ಆಯ್ಕೆಯಾಗುತ್ತಿದ್ದಂತೇ ಶ್ರೇಯಸ್ ಅಯ್ಯರ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಯಾಕೆಂದರೆ ತಂಡದಲ್ಲಿ ಶ್ರೇಯಸ್ ಅಯ್ಯರ್ ಗೆ ಸ್ಥಾನ ನೀಡಲಾಗಿಲ್ಲ.
ಇಂದು ಮುಂಬೈನಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸಭೆ ಸೇರಿ ಟೀಂ ಇಂಡಿಯಾವನ್ನು ಘೋಷಣೆ ಮಾಡಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡಕ್ಕೆ ಶುಭಮನ್ ಗಿಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಗೆ ಸ್ಥಾನ ನೀಡಲಾಗಿಲ್ಲ.
ಶ್ರೇಯಸ್ ಅಯ್ಯರ್ ಐಪಿಎಲ್ ನಲ್ಲಿಯೇ ತಾವು ಶ್ರೇಷ್ಠ ನಾಯಕ, ಟಿ20 ಪ್ಲೇಯರ್ ಎಂದು ಸಾಬೀತುಪಡಿಸಿದ್ದಾರೆ. ಒಮ್ಮೆ ಐಪಿಎಲ್ ಫೈನಲ್ ಗೆದ್ದರೆ ಕಳೆದ ಬಾರಿ ಫೈನಲ್ ತನಕ ಬಂದಿದ್ದರು. ಇಷ್ಟಿದ್ದರೂ ಅವರನ್ನು ಟಿ20 ಫಾರ್ಮ್ಯಾಟ್ ನಿಂದ ಕಡೆಗಣಿಸಲಾಗುತ್ತಿದೆ.
ಇದೇ ಕಾರಣಕ್ಕೆ ಶ್ರೇಯಸ್ ಅಯ್ಯರ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಶ್ರೇಯಸ್ ಬಗ್ಗೆ ಬಿಸಿಸಿಐ ಈ ರೀತಿ ರಾಜಕೀಯ ಮಾಡುತ್ತಿರುವುದು ಯಾಕೆ? ಅವರನ್ನು ಯಾವ ಆಧಾರದಲ್ಲಿ ಕಡೆಗಣಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.